ಸೀಗೆ ಲೆಗ್ಯುಮಿನೋಸೀ ಕುಟುಂಬದ ವಿಮೋಸೀ ಉಪಕುಟುಂಬಕ್ಕೆ ಸೇರುವ ಅಕೇಸಿಯ ಕಾನ್ಸಿನ್ನ ಎಂಬ ಪ್ರಭೇದದ ಮುಳ್ಳಿನ ಮರಬಳ್ಳಿ. ಹಳ್ಳಿಗಳಲ್ಲಿ ಬೇಲಿಗಳಲ್ಲಿ ಬೆಳೆಸುತ್ತಾರೆ. ಕಾಡಿನ ಇನ್ನಿತರ ಮರಗಳ ಮೇಲೆ ಹಬ್ಬಿ ತುಂಬ ಹುಲುಸಾಗಿ ಬೆಳೆಯುವುದುಂಟು. ಇದರ ಕಾಯಿಯಿಂದ ಮಾಡುವ ಪುಡಿಯೇ ಸೀಗೆಪುಡಿ. ತಲೆಗೂದಲನ್ನು ತೊಳೆಯಲು ವಿಶೇಷವಾಗಿ ಬಳಸುತ್ತಾರೆ. ಅಕೇಸಿಯ ಪೆನ್ನೇಟ ಎಂಬ ಇನ್ನೊಂದು ಪ್ರಭೇದವಿದೆ. ಇದು ಕಾಡು ಸೀಗೆಬಳ್ಳಿ. (ಎ.ಕೆ.ಎಸ್.)