ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀಗ್ಲರ್, ಕಾರ್ಲ್

ಸೀಗ್ಲರ್, ಕಾರ್ಲ್ 1898-1973. ಜರ್ಮನಿಯ ರಸಾಯನವಿe್ಞÁನಿ. ಕೈಗಾರಿಕಾ ಮಹತ್ತ್ವವುಳ್ಳ ಪಾಲಿಮರ್‍ಗಳ ಉತ್ಪಾದನೆ ಈತನ ಸಂಶೋಧನ ಕ್ಷೇತ್ರ. ಮಾರ್‍ಬರ್ಗ್ ವಿಶ್ವವಿದ್ಯಾಲಯದ ಪಿಎಚ್.ಡಿ.(1920) ಮತ್ತು ಫ್ರಾಂಕ್‍ಫರ್ಟ್ ಹಾಗೂ ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪನ ವೃತ್ತಿಯಲ್ಲಿ ಪಡೆದ ಅನುಭವ ಈತನ ಸಂಶೋಧನೆಗಳಿಗೆ ಪ್ರೇರಕಗಳಾದುವು. ವಿಕ್ಟರ್ ಗ್ರೀನ್‍ಯಾರ್(1871-1935) ಎಂಬ ಫ್ರೆಂಚ್ ರಸಾಯನವಿe್ಞÁನಿ (1912ರ ನೊಬೆಲ್ ಪ್ರಶಸ್ತಿ ಪುರಸ್ಕøತ) ಗ್ರೀನ್‍ಯಾರ್ ಸಂಯುಕ್ತಗಳೆಂಬ ಮ್ಯಾಗ್ನೀಸಿಯಮ್ ಆಲ್ಕೈಲ್ ಹ್ಯಾಲೈಡ್‍ಗಳನ್ನು ತಯಾರಿಸಿ ಅವನ್ನು ನಾನಾಬಗೆಯ ಆಗ್ರ್ಯಾನಿಕ್ ಸಂಯುಕ್ತಗಳ ಸಂಶ್ಲೇಷಣೆಯಲ್ಲೂ ಬಳಸಬಹುದೆಂದು ಸಾಧಿಸಿದ. ಹಾಗಿದ್ದರೆ ಇತರ ರಾಸಾಯನಿಕ ಕ್ರಿಯೆಗಳಲ್ಲೂ ಲೋಹಯುಕ್ತ ಆಗ್ರ್ಯಾನಿಕ್ ಸಂಯುಕ್ತಗಳನ್ನು ಬಳಸಬಾರದೇಕೆ ಎಂದು ಈತ ಚಿಂತಿಸಿದ. 1930-40ರ ದಶಕದಲ್ಲಿ ಪಾಲಿಮರ್‍ಗಳ ತಯಾರಿಕೆಗೆ ಕ್ರಮಬದ್ಧ ವಿಧಾನ ತಿಳಿದಿರಲಿಲ್ಲ. ಕೇವಲ ಊಹಾಪ್ರಯತ್ನ ವಿಧಾನವೇ ಆಧಾರ. ಪಾಲಿಥೀನ್ ಪ್ಲಾಸ್ಟಿಕ್ ತಯಾರಿಕೆ ಇದಕ್ಕೆ ನಿದರ್ಶನ. ಅನುಕೂಲ ಪ್ರಯೋಗ ಪರಿಸ್ಥಿತಿಯಲ್ಲಿ ಅಂದರೆ ಯುಕ್ತ ತಾಪ ಮತ್ತು ಒತ್ತಡಗಳಲ್ಲಿ ಎಥಿಲೀನ್ (ಅಊ2-ಅಊ2, ಈಥೀನ್ ಇದರ ಅಧಿಕೃತ ರಾಸಾಯನಿಕ ನಾಮ) ಅಣುವಿನ ದ್ವಿಬಂಧ ಬಿಚ್ಚಿಕೊಂಡು ಏಕಬಂಧವಾಗಿ(-ಅಊ2-ಅಊ2-ಅಊ2) ಅಣುಗಳು ಪರಸ್ಪರ ಪೋಣಿಸಿಕೊಂಡು ನೀಳ ಸರಣಿ ರಚನೆಯುಳ್ಳ ಪಾಲಿಥೀನ್‍ನ ಬೃಹದಣುವಾಗುತ್ತದೆ. ನೇರ ಸರಣಿಯಾಗದೆ ಅಲ್ಲಲ್ಲಿ ಅಡ್ಡಸರಣಿಗಳು(ಶಾಖೆಗಳು) ಹುಟ್ಟಿಕೊಳ್ಳಬಹುದು. ಪರಿಣಾಮವಾಗಿ ಬೃಹದಣು ಬಲಹೀನವಾಗುತ್ತದೆ. ತಾಪ ಸ್ವಲ್ಪ ಏರಿದರೂ ಸಾಕು ಇದು ದ್ರವಿಸಿ ಬಿಡುತ್ತದೆ. ಇದರಿಂದ ಪಾಲಿಮರ್‍ನ ಉಷ್ಣನಿರೋಧಕಶಕ್ತಿ ಕಡಿಮೆಯಾಗಿ ಅದು ಅನುಪಯುಕ್ತವಾಗುವ ಸಂಭವವುಂಟು. ವಾಸ್ತವವಾಗಿ ಹೀಗಾಗುತ್ತಿತ್ತು. ಈ ನ್ಯೂನತೆಯ ನಿವಾರಣೆಗೆ ಈತ ಪರಿಹಾರ ಶೋಧಿಸಿದ. ರಾಳವೊಂದಕ್ಕೆ ಅಲ್ಯೂಮಿನಿಯಮ್ ಅಥವಾ ಟೈಟೇನಿಯಮ್ ಲೋಹದ ಅಯಾನ್‍ಗಳನ್ನು ಖಿiಅಟ4 ಲಗತ್ತಿಸಿ ವಿಶೇಷ ಕ್ರಿಯಾವರ್ಧಕಗಳನ್ನು ರೂಪಿಸಿದ. ಟೈಟೇನಿಯಮ್ ಟೆಟ್ರಕ್ಲೋರೈಡ್ ಮತ್ತು ಟ್ರೈ ಈಥೈಲ್ ಅಲ್ಯೂಮಿನಿಯಮ್(ಅ2ಊ5)3ಂಟ ಇದಕ್ಕೆ ಉದಾಹರಣೆ. ಇವುಗಳ ಸಮ್ಮುಖದಲ್ಲಿ ಪಾಲಿಮರೀಕರಿಸಿದ ಪಾಲಿಥೀನ್ ನಾರಿನಂತೆ ಗಟ್ಟಿಯಾಗಿ ಉಷ್ಣನಿರೋಧಕವಾಗಿ ಉನ್ನತ ತಾಪದಲ್ಲಿ ಮಾತ್ರ ದ್ರವಿಸುವಂತಾಗಿ ಅದರ ಉಪಯುಕ್ತತೆ ಹೆಚ್ಚಿತು. ಏತನ್ಮಧ್ಯೆ ಗ್ವೈಲಿಯೊನಟ್ಟಾ (1903-79) ಎಂಬ ಇಟಾಲಿಯನ್ ರಸಾಯನವಿe್ಞÁನಿ ಇದೇ ಬಳಸಿ ಪ್ರೊಪೈಲೀನ್ ನಿಂದ(ಅಊ3-ಅಊ=ಅಊ2) ಪಾಲಿಪ್ರೊಪೈಲೀನ್ ಪ್ಲಾಸ್ಟಿಕ್ ತಯಾರಿಸಿದ. ಏಕಾಣುರೂಪಿಯ ದ್ವಿಬಂಧ ಪಾಲಿಮರೀಕರಿಸುವಾಗ, ಮೀಥೈಲ್ ಗುಚ್ಛಗಳು ನೇರ ಸರಣಿಯ ಎರಡು ಪಾಶ್ರ್ವಗಳಲ್ಲಿ ಹಂಚಿಕೊಳ್ಳದೇ ಒಂದೇ ಪಾಶ್ರ್ವದಲ್ಲಿ ವ್ಯವಸ್ಥೆಗೊಳ್ಳುತ್ತವೆ (ಇವುಗಳಿಗೆ ಸಮದಿಶೀಯ ಅಥವಾ ಐಸೊಟ್ಯಾಕ್ಟಿಕ್ ಪಾಲಿಮರ್‍ಗಳೆಂದು ಹೆಸರು). ಇದರಿಂದ ಪ್ಲಾಸ್ಟಿಕ್ ಬಾಳಿಕೆ ಬರುತ್ತದೆ. ಸೀಗ್ಲರ್-ನಟ್ಟಾ ಇಬ್ಬರಿಗೂ ಕ್ರಿಯಾವರ್ಧಕಗಳ ಉಪಯುಕ್ತ ಆವಿಷ್ಕಾರಕ್ಕಾಗಿ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು (1963). (ಎಚ್.ಜಿ.ಎಸ್.)