ಸೀಫಿಯಸ್ ಖಗೋಳಾಕಾಶದ ಉತ್ತರಧ್ರುವೀಯ ನಕ್ಷತ್ರಪುಂಜ. ಗ್ರೀಕರ ಪುರಾಣೆÂೀತಿಹಾಸದಲ್ಲಿ ಕಾಣಬರುವ ದೊರೆ ಸೀಫಿಯಸನ ಗೌರವಾರ್ಥ ನಕ್ಷತ್ರಪುಂಜಕ್ಕೆ ಈ ಹೆಸರಿದೆ. ಭಾರತೀಯ ಹೆಸರು ಯುಧಿಷ್ಠಿರ. ಈ ನಕ್ಷತ್ರಪುಂಜವನ್ನು ಲಘುಸಪ್ತರ್ಷಿ (ಅರ್ಸ ಮೈನರ್), ಸುಯೋಧನ (ಡ್ರ್ಯಾಕೋ), ರಾಜಹಂಸ (ಸಿಗ್ನಸ್), ಮುಸಲೀ (ಲಿಸರ್ಟ್) ಮತ್ತು ಕುಂತೀ (ಕ್ಯಾಸಿಯೋಪಿಯ) ನಕ್ಷತ್ರಪುಂಜಗಳು ಸುತ್ತುವರಿದಿವೆ. ಸನ್ನಿಹಿತ ಘಂಟಾವೃತ್ತಾಂಶ 21 ಗಂ.; ವಿಷುವದಂಶ 55º ಉ. ನಾಲ್ಕನೆಯ ಕಾಂತಿ ಮಾನಕ್ಕೆ ಮೇಲ್ಪಟ್ಟ 8 ನಕ್ಷತ್ರಗಳು ಈ ಪುಂಜದಲ್ಲಿವೆ. ಇವುಗಳ ಪೈಕಿ m ನಕ್ಷತ್ರಕ್ಕೆ (m ಸೀಫೀ) ಗಾರ್ನೆಟ್‍ಸ್ಟಾರ್ (ರಕ್ತಮಣಿ, ಪದ್ಮರಾಗ ನಕ್ಷತ್ರ) ಎಂದು ಹೆಸರು. ಇದು ಚರಕಾಂತೀಯ ಕೆಂಪುವರ್ಣದ ತಾರೆ. ಈ ಪುಂಜದ ಚಿ ಆಲ್ಡಿರಾಮಿನ್ ಎಂಬುದು 2.44 ಕಾಂತಿಮಾನದ, ಸೂರ್ಯನಿಂದ 52 ಬೆಳಕುವರ್ಷಗಳ ದೂರದಲ್ಲಿರುವ ತಾರೆ. ಂ7 ರೋಹಿತ ದರ್ಶಕೀಯ ಪ್ರರೂಪಕ್ಕೆ ಸೇರಿದೆ. b ಆಲ್‍ಫ್ರಿಕ್ ಎಂಬುದು ಸೀಫಿಡ್ ಚರಕಾಂತೀಯ ಯಮಳ ತಾರೆ. ಕಾಂತಿಮಾನ 3.14-3.19. ಆಲ್‍ರೈ (g) ಎಂಬುದು 3.2 ಕಾಂತಿಮಾನದ ನಕ್ಷತ್ರ. ಜ ಸೀಫೀ. ಕಾಂತಿಮಾನ 3.51-4.42. ಇದು ಉ ರೋಹಿತದರ್ಶಕೀಯ ಪ್ರರೂಪದ್ದು; ಸೂರ್ಯನಿಂದ 1300 ಬೆಳಕು ವರ್ಷಗಳ ದೂರದಲ್ಲಿದೆ.

ಕೆಲವೇ ದಿವಸಗಳ ಅಂತರದಲ್ಲಿ ತಮ್ಮ ಕಾಂತಿಯನ್ನು ಬದಲಾಯಿಸಿಕೊಳ್ಳುವಂಥ ನಕ್ಷತ್ರಗಳನ್ನು ಸೀಫಿಡ್ಡುಗಳೆಂದು ಕರೆಯುವುದಿದೆ. ಇಂಥವು ಸೀಫಿಯಸ್ ಪುಂಜದಲ್ಲಿ ಕೆಲವಿವೆ. *