ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀಬರ್ಗ್, ಗ್ಲೆನ್ ಥಿಯೊಡರ್

ಸೀಬರ್ಗ್, ಗ್ಲೆನ್ ಥಿಯೊಡರ್ 1912-99. ಅಮೆರಿಕದ ಭೌತವಿe್ಞÁನಿ. ಈತ ಒಬ್ಬ ಮೆಕ್ಯಾನಿಕ್‍ನ ಮಗ. ಆಂಗ್ಲ ಸಾಹಿತ್ಯದ ಒಲವು. ಈ ಉದ್ದೇಶದಿಂದಲೇ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ಸೇರಿದ. ಆದರೆ ಅಲ್ಲಿದ್ದ ಪ್ರತಿಭಾವಂತ ಬೋಧಕನೊಬ್ಬನ ಪ್ರಭಾವಕ್ಕೊಳಗಾಗಿ, ಪದವಿ ಕೋರ್ಸಿನ ಮೂರನೆಯ ವರ್ಷದಲ್ಲಿ ವಿe್ಞÁನ ವಿಭಾಗಕ್ಕೆ ಬದಲಾಯಿಸಿಕೊಂಡ. 1934ರಲ್ಲಿ ವಿe್ಞÁನ ಪದವೀಧರನಾದ. 1937ರಲ್ಲಿ ಪಿಎಚ್.ಡಿ. ಗಳಿಸಿ ಕಾಲಕ್ರಮದಲ್ಲಿ ಬಕ್ರ್ಲಿ ವಿಶ್ವವಿದ್ಯಾಲಯದ ಕುಲಪತಿಯೂ ಆದ. ಮ್ಯಾಕ್‍ಮಿಲನ್ (1907-91) ಸಾಹಚರ್ಯದಲ್ಲಿ ಪ್ಲೂಟೋನಿಯಮ್ ಧಾತುವನ್ನು ತಯಾರಿಸಿದ (1940). ಮರುವರ್ಷ ಮ್ಯಾಕ್‍ಮಿಲನ್ ನಿರ್ಗಮಿಸಿದ ತರುವಾಯವೂ ಸಂಶೋಧನೆಯನ್ನು ಮುಂದುವರಿಸಿದ. ಶಿಕಾಗೊ ವಿಶ್ವವಿದ್ಯಾಲಯದ ಲ್ಲಿದ್ದಾಗ ನೆಪ್ಚೂನಿಯಮ್ ಮತ್ತು ಪ್ಲೂಟೋನಿಯಮ್‍ಗಳ ಗುಣಲಕ್ಷಣಗಳನ್ನು ಆಳವಾಗಿ ಅಭ್ಯಸಿಸಿ ಪ್ಲೂಟೋನಿಯಮ್ ಸಹ ಯುರೇನಿಯಮ್‍ನಂತೆ ವಿದಲನಶೀಲ (ಫಿಸ್ಸೈಲ್), ಅದೂ ಪರಮಾಣು ಬಾಂಬಿಗೆ ಉರುವಲಾಗಬಲ್ಲದು ಎಂದು ತೋರಿಸಿದ. ಅವನ ಮತ್ತು ಸಹಚರರ ನಿರಂತರ ಶ್ರಮದ ಫಲವಾಗಿ 1944-51ರ ಅವಧಿಯಲ್ಲಿ ಅನೇಕ ಯುರೇನಿಯಮೇತರ ಧಾತುಗಳ ಆವಿಷ್ಕಾರವಾಯಿತು. ಅಮೆರಿಕಿಯಮ್(95), ಕ್ಯೂರಿಯಮ್(96), ಬರ್ಕಿಲಿಯಮ್(97), ಕ್ಯಾಲಿಫೋರ್ನಿಯಮ್(98) ಆ ಧಾತುಗಳು. ಇವು ರಾಸಾಯನಿಕವಾಗಿ ಸದೃಶವೆಂಬುದು ಗಮನಾರ್ಹ. ಇವೂ ಒಂದು ಬಗೆಯ ವಿರಳ ಭಸ್ಮಧಾತುಗಳ ಎರಡನೆಯ ತಂಡ (ಮೊದಲನೆಯದು ಲ್ಯಾಂಥನೈಡ್‍ಗಳು) ಎಂದು ತೀರ್ಮಾನಿಸಿ ಆಕ್ಟಿನೈಡ್‍ಗಳೆಂದು ಕರೆದ. ಇವುಗಳ ಅಧ್ಯಯನಕ್ಕಾಗಿ ಅದರಲ್ಲೂ ಪ್ರಧಾನವಾಗಿ ಪ್ಲೂಟೋನಿಯಮ್‍ನ ಪತ್ತೆಗಾಗಿ 1951ನೆಯ ಸಾಲಿನ ರಸಾಯನವಿe್ಞÁನ ನೊಬೆಲ್ ಪಾರಿತೋಷಿಕವನ್ನು ಮ್ಯಾಕ್‍ಮಿಲನ್‍ನೊಡನೆ ಜಂಟಿಯಾಗಿ ಹಂಚಲಾಯಿತು. ಸೀಬರ್ಗ್ ಮತ್ತು ಸಹಚರರು ಯುರೇನಿಯಮ್-233 ಸಮಸ್ಥಾನಿಯನ್ನು ತೋರಿಯಮ್‍ನಿಂದ ತಯಾರಿಸಿ, ಇದೂ ಯುರೇನಿಯಮ್-235ರಂತೆ ವಿದಲನಶೀಲ ಮತ್ತು ಪರಮಾಣುಶಕ್ತಿಯ ಮೂಲವಾಗಬಲ್ಲದು ಎಂದು ಪ್ರದರ್ಶಿಸಿದರು. ಪರಿಣಾಮವಾಗಿ ಮಾನವನಿಗೆ ಇನ್ನೊಂದು ಬೈಜಿಕ ಉರುವಲಿನ ಆಕರ ದೊರೆತಂತಾಯಿತು. ಇತರ ಆಕ್ಟಿನೈಡ್‍ಗಳ ಪತ್ತೆ ಕೆಲಸ ಮುಂದುವರಿಯಿತು. ಐನ್‍ಸ್ಟೈನಿಯಮ್(99), ಫರ್ಮಿಯಮ್(100), ಮೆಂಡಲೀವಿಯಮ್ (101), ನೊಬೆಲಿಯಮ್(102) ಮತ್ತು ಲಾರೆನ್ಸಿಯಮ್(103) ಇವನ್ನು ಶೋಧಿಸಲಾಯಿತು. ಈ ನೂತನ ಧಾತುಗಳಿಗೆ ಅಂದಿನ ಪ್ರಸಿದ್ಧ ವಿe್ಞÁನಿಗಳ ಹೆಸರಿಟ್ಟಿರುವುದು ಗೌರವಸೂಚಕ. 1961ರಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನಗಳ ಪರಮಾಣವಿಕ ಶಕ್ತಿ ಆಯೋಗದ ಮತ್ತು 1970ರಲ್ಲಿ ವಿe್ಞÁನ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷನಾಗಿ ಈತ ಆಯ್ಕೆಯಾದ. (ಎಚ್.ಜಿ.ಎಸ್.)