ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಯಾಂಗರ್, ಫ್ರೆಡರಿಕ್

ಸ್ಯಾಂಗರ್, ಫ್ರೆಡರಿಕ್ 1918. ಇಂಗ್ಲಿಷ್ ಜೀವರಸಾಯನವಿe್ಞÁನಿ, ಇನ್ಸುಲಿನ್ ಅಣುರಚನೆಯ ಶೋಧನೆ ಆಸಕ್ತ ಕ್ಷೇತ್ರ. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಸ್ನಾತಕ (1939), ಅನಂತರ ಪಿಎಚ್.ಡಿ. (1943), ತರುವಾಯ ಸಂಶೋಧನೆ. ಕ್ರಿಕ್ (1916-2004) ಮತ್ತು ವಾಟ್ಸನ್ (1928) ಇವರಂಥ ಮಹಾನ್ ವಿe್ಞÁನಿಗಳ (ಡಿಎನ್‍ಎ ಅಣುರಚನೆಯ ಕ್ರಾಂತಿಕಾರಕ ಸಂಶೋಧಕರು, ನೊಬೆಲ್ ಪ್ರಶಸ್ತಿ ಪುರಸ್ಕøತರು, 1962) ಶಿಷ್ಯತ್ವ ದೊರೆತ ಸ್ಯಾಂಗರ್ ಭಾಗ್ಯವಂತ. ಆಗಲೇ ಈತ ಪ್ರೋಟೀನುಗಳ ಅಣುರಚನೆ ಕುರಿತ ಸಂಶೋಧನೆ ಪ್ರಾರಂಭಿಸಿ, ಮಾರ್ಟಿನ್ ಮತ್ತು ಸಿಂಜ್‍ರವರ ಪತ್ರವರ್ಣರೇಖನ (ಪೇಪರ್ ಕ್ರೊಮಟೋಗ್ರಫಿ) ತಂತ್ರವನ್ನು ತನ್ನ ಸಂಶೋಧನೆಗೆ ಅಣಿಗೊಳಿಸಿದ. ಇದರ ಸಲುವಾಗಿ ಅಮೈನೊ ಆಮ್ಲಗಳ ಉದ್ದ ಸರಣಿಗಳನ್ನು ಸಣ್ಣದಾಗಿಸಿಕೊಂಡ. ಅಲ್ಲದೆ ಒಂದು ನೂತನ ಅಭಿಕಾರಕವನ್ನು(ರಿಯೇಜೆಂಟ್) ಸಿದ್ಧಪಡಿಸಿದ(1945). ಅದೇ 1-ಫ್ಲೂರೊ 2,4 ಡೈನೈಟ್ರೊಬೆನ್ಸೀನ್ (ಸಂಕ್ಷೇಪವಾಗಿ ಎಫ್‍ಡಿಎನ್‍ಬಿ) “ಸ್ಯಾಂಗರ್ ಪರಿವರ್ತಕ” ಎಂದು ಇಂದೂ ಪ್ರಸ್ತುತ. ಪ್ರಯೋಗಿಸಿದರೆ ಅದು ಅಮೈನೊ ಆಮ್ಲ ಸರಣಿಯ ಒಂದು ತುದಿಗೆ ಮಾತ್ರ ಭದ್ರವಾಗಿ ಕಚ್ಚಿಕೊಳ್ಳುತ್ತಿತ್ತು. ಮತ್ತೆ ಆ ಸರಣಿಯನ್ನು ಒಡೆದು, ಲಭ್ಯತುಂಡುಗಳಿಗೆ ಎಫ್‍ಡಿಎನ್‍ಬಿ ಪ್ರಯೋಗಿಸಿ, ತುಂಡಿನ ಯಾವ ತುದಿಗೆ ಎಫ್‍ಡಿಎನ್‍ಬಿ ಅಂಟಿಕೊಂಡಿದೆ ಎಂದು ಪರೀಕ್ಷಿಸಿ, ಯಾವ ತುದಿ ಅಭೇದ್ಯವೆಂಬುದನ್ನು ಸ್ಪಷ್ಟವಾಗಿ ಗುರುತಿಸಿದ. ಸ್ಯಾಂಗರ್ ಮುಂದೆ ಇನ್ಸುಲಿನ್ ಸಂಶೋಧನೆಗೈದ. ಇದನ್ನು ಬೆಸ್ಟ್ ಮತ್ತು ಬ್ಯಾಟಿಂಗ್ ಸು. 25 ವರ್ಷಗಳ ಹಿಂದೆಯೇ ಪತ್ತೆ ಹಚ್ಚಿದ್ದರು (ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ನಿಯಂತ್ರಿಸುವ, ಮೇದೋಜೀರಕ ಗ್ರಂಥಿ ಸ್ರವಿಸುವ ಹಾರ್ಮೋನ್. ಇನ್ಸುಲಿನ್ ಇದರ ಕೊರತೆ ಸಿಹಿಮೂತ್ರರೋಗಕ್ಕೆ ಕಾರಣ). ಇದು 51 ಅಮೈನೊ ಆಮ್ಲಗಳಿಂದಾದ ಪ್ರೋಟೀನ್. ಇದರಲ್ಲಿ ಎರಡುಸರಣಿಗಳಿವೆ: ಒಂದರಲ್ಲಿ 30 ಮತ್ತೊಂದರಲ್ಲಿ 21 ಅಮೈನೊ ಆಮ್ಲಗಳು. ತನ್ನ ಎಫ್‍ಡಿಎನ್‍ಬಿ ಪರಿವರ್ತಕದ ಪ್ರಯೋಗದಿಂದ ಮತ್ತಿತರ ವಿಧಾನಗಳಿಂದ ಎರಡೂ ಸರಣಿಗಳಲ್ಲಿರುವ ಅಮೈನೊ ಆಮ್ಲಗಳು ಯಾವುವು, ಅವು ಯಾವ ಕ್ರಮದಲ್ಲಿ ಜೋಡಣೆಯಾಗಿವೆ ಎಂಬುದನ್ನು ನಿಚ್ಚಳವಾಗಿ ಚಿತ್ರಿಸಿದ. ಇದೊಂದು ಅಭೂತಪೂರ್ವ ಶೋಧವಾಗಿತ್ತು. ಇದರಿಂದ ಉತ್ತೇಜಿತರಾದ ಇತರ ಸಂಶೋಧಕರು ಆಕ್ಸಿಟಾಸಿನ್, ವ್ಯಾಸೊಪ್ರೆಸಿನ್ ಮುಂತಾದ ಹಾರ್ಮೋನುಗಳನ್ನು ಗುರುತಿಸಿ ಅವನ್ನು ಪ್ರಯೋಗಶಾಲೆಯಲ್ಲಿ ಸಂಶ್ಲೇಷಿಸಿಯೂ ಬಿಟ್ಟರು. ಮುಂದೆ ಮಯೊಗ್ಲಾಬಿನ್ ಮತ್ತು ಹಿಮೊಗ್ಲಾಬಿನ್ ಪ್ರೋಟೀನುಗಳ ಅಣುರಚನೆಯ ನಿರ್ಣಯಕ್ಕೂ ಸ್ಯಾಂಗರನ ಸಂಶೋಧನೆ ನಾಂದಿಯಾಯಿತು. ಹೀಗೆ ಪ್ರೋಟೀನ್ ರಸಾಯನವಿe್ಞÁನದಲ್ಲಿ ಒಂದು ಕ್ರಾಂತಿಯನ್ನೇ ಎಬ್ಬಿಸಿದ ಹರಿಕಾರನಾದ ಈತ ನೊಬೆಲ್ ಪ್ರಶಸ್ತಿ ಪುರಸ್ಕøತನಾದ (1958). (ಎಚ್.ಜಿ.ಎಸ್.)