ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಯಾಲಿಸಿಲಿಕ್ ಆಮ್ಲ

ಸ್ಯಾಲಿಸಿಲಿಕ್ ಆಮ್ಲ - ಆರ್ಥೊಹೈಡ್ರಾಕ್ಸಿಬೆನ್ಝೋಯಿಕ್ ಆಮ್ಲ. ಬಿಳಿ ಸ್ಫಟಿಕೀಯ ಘನ. ಎಥನಾಲ್ ಮತ್ತು ಈಥರ್‍ಗಳಲ್ಲಿ ಲೀನಿಸುತ್ತದೆ. ನೀರಿನಲ್ಲಿ ಮಿತವಾಗಿ ವಿಲೇಯ. ದ್ರವನ ಬಿಂದು: 1590 ಸೆ. ಅಣುಸೂತ್ರ: C6H4(OH)COOH. ಕೆಲವು ಸಸ್ಯಗಳ ಎಲೆ ಮತ್ತು ಹೂವುಗಳಲ್ಲಿ ಸ್ವತಂತ್ರ ಸ್ಥಿತಿಯಲ್ಲಿ ಲಭ್ಯ (ಉದಾ: ಡೇಯ್ಸಿ). ಅನೇಕ ಹಣ್ಣುಗಳಲ್ಲಿ ಮೀಥೈಲ್ ಸ್ಯಾಲಿಸಿಲೇಟ್ ರೂಪದಲ್ಲಿ ಲಭ್ಯ. ಫೀನಾಲ್‍ನ ಕಾರ್ಬಾಕ್ಸಿಲೀಕರಣದಿಂದ ವಾಣಿಜ್ಯೋತ್ಪಾದನೆ.

ಅನೇಕ ಉಪಯುಕ್ತ ಎಸ್ಟರುಗಳು ಮತ್ತು ಲವಣಗಳು ಈ ಆಮ್ಲದಿಂದ ಲಭ್ಯ. ಆಹಾರ ಸಂರಕ್ಷಕವಾಗಿ, ರಂಗುಗಳ ತಯಾರಿಯಲ್ಲಿ, ಔಷಧಿಗಳ ಮತ್ತು ಸೌಮ್ಯ ಪೂತಿನಾಶಕಗಳ ತಯಾರಿಯಲ್ಲಿ ಇವುಗಳ ಬಳಕೆ ಇದೆ. ಉದಾ: ಸೋಡಿಯಮ್ ಸ್ಯಾಲಿಸಿಲೇಟ್ - ಆಹಾರ ಸಂರಕ್ಷಕ, ಟೂತ್‍ಪೇಸ್ಟ್ ಮತ್ತು ಮೌತ್‍ವಾಷ್‍ಗಳಲ್ಲಿ ಪೂತಿನಾಶಕ. ಅಸೆಟಿಲ್‍ಸ್ಯಾಲಿಸಿಲಿಕ್ ಆಮ್ಲ (ಆಸ್ಪಿರಿನ್) - ನೋವುಶಾಮಕ, ಜ್ವರಹಾರಿ. ಫೀನೈಲ್ ಸ್ಯಾಲಿಸಿಲೇಟ್ (ಸ್ಯಾಲಾಲ್) -ನೋವುಶಾಮಕ, ಜ್ವರಹಾರಿ. ಮೀಥೈಲ್ ಸ್ಯಾಲಿಸಿಲೇಟ್(ವಿಂಟರ್‍ಗ್ರೀನ್ ತೈಲ) - ಆಹಾರ ರುಚಿಕಾರಕ(ಫ್ಲೇವರಿಂಗ್), ಸಂಧಿವಾತ ನೋವುಶಾಮಕ ಉಜ್ಜುತೈಲ(ಲಿನಿಮೆಂಟ್) ಮೆಂತಿಲ್‍ಸ್ಯಾಲಿಸಿಲೇಟ್ - ಸನ್‍ಟ್ಯಾನ್ ಲೋಷನ್. (ಎಸ್.ಎನ್.ಆರ್.)