ಸ್ರಗ್ಧರೆ ನಾಲ್ಕು ಸಮಾನ ಪಾದಗಳುಳ್ಳ ವೃತ್ತಪದ್ಯಗಳ ಪೈಕಿ ಒಂದು. ತೋರಲ್ ಮಂರಂಭನಂಮೂಯಗಣಮುಮದೆ ತಾಂ ಸ್ರಗ್ಧರಾವೃತ್ತಮಕ್ಕುಂ ಎಂಬುದು ಈ ಪದ್ಯದ ಸೂತ್ರ. ಪ್ರತಿ ಪಾದದಲ್ಲೂ ಇಪ್ಪತ್ತೊಂದು ಅಕ್ಷರಗಳಿವೆ. ಪದ್ಯದ ಪ್ರತಿ ಪಾದವೂ ಮ, ರ, ಭ, ನ, ಯ, ಯ, ಯ ಗಣಗಳಿಂದ ಕೂಡಿರುವುದು. ಉದಾಹರಣೆಗೆ :

ಕಾರುಣ್ಯಂಗೆಯ್ದುಸದ್ದೀಕ್ಷೆಯನೆಸಗಿಲಸಚ್ಚಿತ್ಕ್ರಿಯಾಮಾರ್ಗಮೆಂಪೇ
ಳ್ದಾರಾಜತ್ಸೂನುಗಾಚಾರ್ಯತೆಯನೊಸೆದುತಾನಿತ್ತುಮೀಶಾಜ್ಞೆಯಿಂದಿಂ|
*