ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಲವೊಫಿಲರು

ಸ್ಲವೊಫಿಲರು 1825-40ರ ಅವಧಿಯಲ್ಲಿ ರಷ್ಯದಲ್ಲಿ ನಡೆದ ಬೌದ್ಧಿಕ ಆಂದೋಲನದ ಫಲವಾಗಿ ಉದಯವಾದ ಒಂದು ಗುಂಪು. ಸ್ವದೇಶಪ್ರೇಮಿಗಳಾಗಿದ್ದ ಇವರು ಪೀಟರ್‍ನ ನೀತಿಯನ್ನೂ ಪೀಟರ್ಸ್ ಬರ್ಗ್ ಪ್ರಭುತ್ವವನ್ನೂ ವಿರೋಧಿಸಿದರು. ಪ್ರಾಚೀನ ರಷ್ಯದ ಅಧ್ಯಯನ ದಿಂದ ಕಂಡುಕೊಂಡ ಕೆಲವು ಆದರ್ಶಗಳನ್ನು ಎತ್ತಿಹಿಡಿದು, ತರ್ಕಬದ್ಧ ವಿವೇಚನಾ ಶಕ್ತಿಗಿಂತ ತರ್ಕವರಿಯದ ಸ್ವಭಾವಜನ್ಯ ಯುಕ್ತಾಯುಕ್ತ ಪರಿe್ಞÁನವೇ ಮೇಲೆಂದು ಸಾರಿದರು. ಯುರೋಪನ್ನೂ ರೋಮ್‍ನ ಚರ್ಚನ್ನೂ ತಿರಸ್ಕರಿಸಿದರು. ರಷ್ಯ ಹಿಂದುಳಿದ ಯುರೋಪ್ ಮಾತ್ರವಾಗಿರಬೇಕಾಗಿಲ್ಲ; ತನ್ನದೇ ಆದ ಸಂಸ್ಕøತಿ, ಸಂದೇಶಗಳನ್ನು ಪಡೆದ ಶ್ರೀಮಂತ ದೇಶ ಇದು ಎನ್ನುವುದು ಇವರ ವಾದದ ತಿರುಳಾಗಿತ್ತು. (ಎಲ್.ಎಸ್.ಎಸ್.)