ಹರಿವರ್ಮ ಬನವಾಸಿಯ ಮೂಲ ಕದಂಬ ವಂಶದ ಕೊನೆಯ ರಾಜ (ಸು. 519-30). ರವಿವರ್ಮನ ಮಗ ಮತ್ತು ಉತ್ತರಾಧಿಕಾರಿ. ಇವನ ಆಳಿಕೆ ಪ್ರಾರಂಭವಾದ ಕೆಲವು ವರ್ಷಗಳಲ್ಲೇ ತ್ರಿಪರ್ವತದ ಕದಂಬ ಶಾಖೆಯ ಇಮ್ಮಡಿ ಕೃಷ್ಣವರ್ಮ ಈತನನ್ನು ಸೋಲಿಸಿ ಸು. 526ರ ಅನಂತರ ಬನವಾಸಿಯನ್ನು ಆಕ್ರಮಿಸಿಕೊಂಡ. ಇದೇ ಕಾಲದಲ್ಲಿ ಚಾಳುಕ್ಯ ರಾಜ ಒಂದನೆಯ ಪುಲಕೇಶಿ ಕದಂಬರನ್ನು ಧಿಕ್ಕರಿಸಿ ಬಾದಾಮಿಯ ಸುತ್ತಣ ಪ್ರದೇಶದ ಆಧಿಪತ್ಯವನ್ನು ಸಾಧಿಸಿಕೊಂಡ.

ಹರಿವರ್ಮನ ಒಬ್ಬ ಮಗಳನ್ನು ಸಾಂತರವಂಶದ ತ್ಯಾಗಿ ಸಾಂತರ ಮದುವೆಯಾಗಿದ್ದ, ಸೇಂದ್ರಕ ವಂಶದ ಭಾನುಶಕ್ತಿ ಹರಿವರ್ಮನ ಸಾಮಂತನಾಗಿದ್ದ ಎಂಬ ವಿಷಯಗಳು ಶಾಸನಗಳಿಂದ ತಿಳಿಯುತ್ತವೆ. (ಜಿ.ಆರ್.ಆರ್.)