ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹರ್ಷಲ್, ವಿಲಿಯಮ್

ಹರ್ಷಲ್, ವಿಲಿಯಮ್ 1738-1822. ಜರ್ಮನ್-ಇಂಗ್ಲಿಷ್ ಖಗೋಳವಿe್ಞÁನಿ. ಯುರೇನಸ್ (ನೋಡಿ- ಯುರೇನಸ್) ಗ್ರಹದ ಆವಿಷ್ಕರ್ತೃ. ಮೂಲ ಜರ್ಮನಿಗನಾಗಿದ್ದರೂ ಏಳು ವರ್ಷಗಳ ಯುದ್ಧದ ವೇಳೆ ಇವನ ತಂದೆತಾಯಿ ಇವನನ್ನು ಇಂಗ್ಲೆಂಡಿಗೆ ಗುಟ್ಟಾಗಿ ಸಾಗಹಾಕಿದರು (1757). ಸೃಜನಶೀಲ ಆರ್ಗನ್ ವಾದಕನೂ ಬೋಧಕನೂ ಆಗಿದ್ದ ಇವನಿಗೆ ಧ್ವನಿವಿe್ಞÁನದಲ್ಲಿ, ಮುಂದಕ್ಕೆ ಖಗೋಳವಿe್ಞÁನದಲ್ಲಿ (ಇದನ್ನು ನಕ್ಷತ್ರಗಳ ಮೌನಗಾನ ಎನ್ನುವುದುಂಟು) ಸಹಜವಾಗಿ ಆಸಕ್ತಿ ಕುದುರಿತು. ಖಗೋಳವೀಕ್ಷಣೆಯ ಸಲುವಾಗಿ ಯಾಂತ್ರಿಕ ಸಲಕರಣೆಗಳನ್ನು, ಅದರಲ್ಲಿಯೂ ಪ್ರಬಲ ದೂರದರ್ಶಕಗಳನ್ನು ನಿರ್ಮಿಸಿದ. 1.2 ಮೀ ನಾಭೀ ದೂರ ಮತ್ತು 1.2 ಮೀ ದೃಶ್ಯದ್ವಾರ ಇರುವ ಈತ ನಿರ್ಮಿಸಿದ ದೂರದರ್ಶಕ ಪ್ರಸಿದ್ಧವಾಗಿದೆ.

ನಕ್ಷತ್ರಲೋಕದ ದೂರದರ್ಶಕ ಸರ್ವೇಕ್ಷಣೆ ವೇಳೆ ಈತನಿಗೆ ಶನಿಗ್ರಹದ ಆಚೆಗೆ ಇದ್ದ ಮಸಕು ತಾರೆಯೊಂದು ಗೋಚರಿಸಿತು. ಆದರೆ ಇದರ ನೆಲೆ ಸ್ಥಿರವಾಗಿರಲಿಲ್ಲ. ದೀರ್ಘ ವೀಕ್ಷಣೆ-ಅಧ್ಯಯನಾನಂತರ ಇದೊಂದು ಗ್ರಹ, ಸೌರವ್ಯೂಹದ ಏಳನೆಯ ಸದಸ್ಯ ಮತ್ತು ಇದರ ಕಕ್ಷೆ ಶನಿಯದರದ್ದಕ್ಕಿಂತ ಆಚೆಗೆ ಇದೆ ಎಂದು ನಿರ್ಣಾಯಕವಾಗಿ ಸಾರಿದ (1781). ಇದೇ ಯುರೇನಸ್ ಗ್ರಹ. ಮುಂದೆ ಇದರ ಹಾಗೂ ಶನಿಗ್ರಹದ ಹಲವಾರು ಉಪಗ್ರಹಗಳನ್ನು ಪತ್ತೆ ಮಾಡಿದ. ಬೋಡ್ ನಿಯಮದ 7ನೆಯ ಪದಕ್ಕೆ ಯುರೇನಸ್ ಕಕ್ಷೆಯ ಸರಾಸರಿ ಸೂರ್ಯದೂರ ಹೊಂದುವುದು. ಇದೊಂದು ಆಕಸ್ಮಿಕ. *