ಹಸ್ತಾ - ದಕ್ಷಿಣ ಖಗೋಳಾಕಾಶದ ಹಸ್ತಾನಕ್ಷತ್ರ ಪುಂಜದ (ಕೊರ್ವಸ್) ಒಂದು ತಾರೆ (ಡೆಲ್ಟಾ ಕೊರ್ವಸ್; ಆಲ್ಗೊರೆಲ್). ಘಂಟಾವೃತ್ತಾಂಶ 12ಗಂ. 28ಮಿ. 43ಸೆ; ವಿಘುವದಂಶ 1602313611 ದ. ಕಾಂತಿಮಾನ 2.97. ನಿರಪೇಕ್ಷ ಕಾಂತಿಮಾನ +0.1. ರೋಹಿತದರ್ಶಕೀಯ ಪ್ರರೂಪ 40. ಸೂರ್ಯನಿಂದ 450 ಬೆಳಕುವರ್ಷಗಳ ದೂರದಲ್ಲಿದೆ.

ಭಾರತೀಯ ಜ್ಯೋತಿಶ್ಶಾಸ್ತ್ರದ ರೀತ್ಯ ಅಶ್ವಿನ್ಯಾದಿ 27 ನಕ್ಷತ್ರಗಳ ಪೈಕಿ 13ನೆಯದು. ಕನ್ಯಾರಾಶಿಗೆ (ವಿರ್ಗೋ) ಸೇರಿದೆ. ದೇವಗಣ, ಮಹಿಷಯೋನಿ, ಕಂಠರಜ್ಜು, ಆದಿನಾಡಿಗಳಿಗೆ ಸೇರಿದ ನಕ್ಷತ್ರವಿದು. ಈ ನಕ್ಷತ್ರದಲ್ಲಿ ಜನಿಸಿದವರು ಉತ್ಸಾಹಿಗಳೂ ಧಾಷ್ಟಿಕವುಳ್ಳವರೂ ಸ್ತೇಯವಸ್ತುಗಳಲ್ಲಿ ವಿಶೇಷ ಆಸಕ್ತಿ ಉಳ್ಳವರೂ ದಯಾಶೂನ್ಯರೂ ಪರರ ಸ್ವತ್ತನ್ನು ಅಪಹರಿಸುವವರೂ ಸಂಪದ್ಭರಿತರೂ ಆಗಿರುತ್ತಾರೆಂದು ಹೇಳಿದೆ.