ಹಾಗಲ - ಮೊಮೊರ್ಡಿಕ ಚರಂಷಿಯ ಪ್ರಭೇದದ ಈ ಬಳ್ಳಿ ಕುಕರ್‍ಬಿಟೇಸಿ ಕುಟುಂಬಕ್ಕೆ ಸೇರುತ್ತದೆ. ಇದಕ್ಕೆ ಇಂಗ್ಲಿಷ್‍ನಲ್ಲಿ ಬಿಟ್ಟರ್‍ಗಾರ್ಡ್, ಹಿಂದಿಯಲ್ಲಿ ಕರೇಲಾ ಮತ್ತು ಕನ್ನಡದಲ್ಲಿ ಹಾಗಲಕಾಯಿ ಎಂದು ಹೆಸರಿದೆ. ಭಾರತದ ಎಲ್ಲ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ. ಇದು ಕಹಿಯಾಗಿದ್ದರೂ ತರಕಾರಿಯ ರೂಪದಲ್ಲಿ ಉಪಯೋಗಿಸುತ್ತಾರೆ. ಇದರ ಎಲೆ, ಬೇರು, ಹಣ್ಣುಗಳು ಔಷಧೀಯ ಗುಣಗಳನ್ನು ಹೊಂದಿವೆ. ಕ್ಯಾನ್ಸರ್ ಬೆಳೆವಣಿಗೆಯನ್ನು ತಡೆಗಟ್ಟಲು ಇದು ಉಪಯುಕ್ತವಾಗಿದೆ. ಸಕ್ಕರೆ ಕಾಯಿಲೆ, ಬಾಯಿಹುಣ್ಣು, ರಕ್ತಸ್ರಾವ, ಪಿತ್ತಶಮನ ಮತ್ತು ವ್ರಣಗಳ ಉಪಶಮನಕ್ಕೆ ಸಹಾಯಕಾರಿ. ಎದೆಹಾಲು ಕಡಿಮೆ ಇರುವ ತಾಯಿಂದಿರು ಹತ್ತು ಮಿಲಿಯಷ್ಟು ಹಾಗಲಕಾಯಿ ರಸವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಎದೆಯಲ್ಲಿ ಹಾಲಿನ ಪ್ರಮಾಣ ಹೆಚ್ಚುತ್ತದೆ ಎನ್ನಲಾಗಿದೆ.

(ಎ.ಜಿ.ಡಿ.)