ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಬೆರ್, ಫ್ರಿಟ್ಸ್‌

ಹಾಬೆರ್, ಫ್ರಿಟ್ಸ್ 1868-1934. ಜರ್ಮನಿಯ ರಸಾಯನವಿe್ಞÁನಿ. ಈತನ ಸಂಶೋಧನ ಕ್ಷೇತ್ರ ಅಮೋನಿಯ ಸಂಶ್ಲೇಷಣೆ. ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಹಾಫ್ಮನ್‍ನ (1818-92) ಮಾರ್ಗದರ್ಶನ ದೊರೆತು ಡಾಕ್ಟೊರೇಟ್ ಪದವಿ ಪಡೆದ. ಬರ್ಲಿನ್ ಸಮೀಪದಲ್ಲೇ ಇದ್ದ ಡಾಹ್ಲೆಮ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹುದ್ದೆ ದೊರೆಯಿತು (1898). ಆ ವೇಳೆಗಾಗಲೇ ಓಸ್ಟ್ವಾÀಲ್ಡ್ (1853-1932) ಮತ್ತು ಅರ್ಹೇನಿಯಸ್ (1859-1927) ಎಂಬವರು ಭೌತರಸಾಯನವಿe್ಞÁನವೆಂಬ ಹೊಸ ಶಾಖೆಯನ್ನು ಪ್ರಾರಂಭಿಸಿದ್ದರು. ಇನ್ನೂ ಶೈಶವಾಸ್ಥೆಯಲ್ಲಿದ್ದ ವಿದ್ಯುತ್‍ರಸಾಯನವಿe್ಞÁನ ಕ್ಷೇತ್ರದಲ್ಲಿ ಪ್ರಯೋಗನಿರತನಾದ. ದ್ರಾವಣಗಳ ಪಿಎಚ್ ಮೌಲ್ಯ ಅಳೆಯಲು ಇಂದಿಗೂ ಬಳಸುವ ಗಾಜಿನ ಎಲೆಕ್ಟ್ರೋಡ್‍ನ ನಿರ್ಮಾಪಕ ಇವನೇ. ಕೆಲಕಾಲ ತನ್ನ ಗುರುವಾಗಿದ್ದ ಬುನ್‍ಸೆನ್ (1811-99) ರಚಿಸಿದ್ದ ದೀಪದ ಜ್ವಾಲೆಯಲ್ಲಿ ಅನಿಲಗಳು ದಹಿಸಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳನ್ನು ತನಿಖೆ ಮಾಡುವ ಸಂದರ್ಭದಲ್ಲಿ ಇವನಿಗೆ ಅಮೋನಿಯ ತಯಾರಿಕೆಯ ಬಗ್ಗೆ ಹೊಳೆಯಿತು. ವಾಯುಮಂಡಲದಲ್ಲಿ ಹೇರಳವಾಗಿರುವ ನೈಟ್ರೊಜನ್‍ನ ಸದುಪಯೋಗದ ಬಗ್ಗೆ 20ನೆಯ ಶತಮಾನದ ಆದಿಭಾಗದಲ್ಲಿ ವ್ಯಾಪಕ ಪ್ರಯೋಗಗಳು ನಡೆದಿದ್ದುವು. ರಸಗೊಬ್ಬರಗಳ ಮತ್ತು ಸಿಡಿಮದ್ದುಗಳ ತಯಾರಿಕೆಗೆ ನೈಟ್ರೊಜನ್ ಸಂಯುಕ್ತಗಳು ಅಗತ್ಯ ಆಕರ. ದಕ್ಷಿಣ ಅಮೆರಿಕದ ಚಿಲಿಯ ನೈಟ್ರೇಟ್ ಸಂಗ್ರಹ, ಪ್ರಪಂಚದ ಕೈಗಾರಿಕಾ ಕೇಂದ್ರಗಳಿಂದ ಬಲುದೂರದಲ್ಲಿದ್ದುದರಿಂದ ವಾಯುಮಂಡಲದಲ್ಲಿ ಸೇ. 80ರಷ್ಟು (ಗಾತ್ರಾನುಸಾರ) ಇರುವ ನೈಟ್ರೊಜನ್‍ನ ಲಾಭ ಪಡೆಯಬಾರದೇಕೆ ಎಂಬ ಭಾವನೆ ಬೇರೂರಿತು. ಈತ ಈ ದಿಶೆಯಲ್ಲಿ ಕಾರ್ಯೋನ್ಮುಖನಾದ. ಕಬ್ಬಿಣ ಕ್ರಿಯಾವರ್ಧಕ ಸಮ್ಮುಖದಲ್ಲಿ ನೈಟ್ರೊಜನ್ ಮತ್ತು ಹೈಡ್ರೊಜನ್‍ಗಳು ಸಂಯೋಜಿಸುವಂತೆ ಮಾಡಿ ಅಮೋನಿಯವನ್ನು ತಯಾರಿಸಿಯೇ ಬಿಟ್ಟ. ಈ ಪ್ರಮುಖ ಸಂಶೋಧನೆಯನ್ನು ಮೆಚ್ಚಿದ ಕೈಸರ್ ವಿಲ್‍ಹೆಲ್ಮ್ ಸಂಸ್ಥೆಯವರು ಅಂದು ಭೌತರಸಾಯನ ಮತ್ತು ವಿದ್ಯುದ್ರಸಾಯನವಿe್ಞÁನಗಳಿಗೆ ಮೀಸಲಾಗಿದ್ದ ಏಕೈಕ ಅಧ್ಯಯನ ಕೇಂದ್ರ ಸಂಸ್ಥೆಯ ನಿರ್ದೇಶಕನಾಗಿ ಇವನನ್ನು ನೇಮಿಸಿದರು. ಈತನ ಅಮೋನಿಯ ವಿಧಾನಕ್ಕೆ ಸೂಕ್ಷ್ಮವಾದ ಪ್ರಯೋಗ ಪರಿಸ್ಥಿತಿಗಳನ್ನು ಶೋಧಿಸಿದಾತ ಬಾಷ್. 200 ವಾಯುಮಾನಗಳಷ್ಟು ಒತ್ತಡ, 4450-5500 ಸೆ ತಾಪಮಿತಿ, ಸೂಕ್ಷ್ಮಕಣ ಸ್ಥಿತಿಯಲ್ಲಿರುವ ಕಬ್ಬಿಣ ಕ್ರಿಯಾವರ್ಧಕ, ಅದಕ್ಕೆ ಬೆಂಬಲವಾಗಿ ಮಾಲಿಬ್ಡಿನಮ್ ಇರುವುದು ಅಪೇಕ್ಷಣೀಯ ಎಂದು ತೋರಿಸಿದ. ಈ ಆವಿಷ್ಕಾರದಿಂದ ಒಂದನೆಯ ಮಹಾಯುದ್ಧದಲ್ಲಿ ಜರ್ಮನಿಯ ಸೈನ್ಯ ನಿರ್ನಾಮವಾಗದೆ ಉಳಿಯಿತು. ಜರ್ಮನಿಗೆ ಅಮೆರಿಕದಿಂದ ನೈಟ್ರೇಟ್ ರಫ್ತಾಗದಂತೆ ತಡೆದರೆ ಆಗ ಸಿಡಿಮದ್ದುಗಳ ಅಭಾವದಿಂದ ಬಾಂಬ್‍ಗಳನ್ನು ತಯಾರಿಸಲಾಗದೆ ಜರ್ಮನಿ ಶರಣಾಗುವುದು ಖಾತ್ರಿ ಎಂಬ ಬ್ರಿಟಿಷರ ಲೆಕ್ಕಾಚಾರ ಹುಸಿಯಾಯಿತು. ಯುದ್ಧ ಇನ್ನೂ ಎರಡು ವರ್ಷ ಮುಂದುವರಿಯಿತು. ಅಂತಿಮವಾಗಿ ಜರ್ಮನಿ ಸೋತರೂ ಈತನ ಅಮೋನಿಯ ವಿಧಾನದಿಂದ ಆಗಬಹುದಾದ ದೂರಗಾಮಿ ಉಪಯೋಗಗಳನ್ನು ಮನಗಂಡ ನೊಬೆಲ್ ಸಮಿತಿ ಇವನಿಗೆ ಪ್ರಶಸ್ತಿ ಪ್ರದಾನ ಮಾಡಿತು (1918). ಕಲ್ಲಿದ್ದಲನ್ನು ಹೈಡ್ರ್ರೊಜನೀಕರಿಸಿ ಪೆಟ್ರೋಲ್ ತಯಾರಿಸುವ ಬರ್ಜಿಯಸ್-ಪ್ರಯೋಗಕ್ಕೂ ಇವನ ಸಂಶೋಧನೆ ಆಧಾರವಾಯಿತು. ಈತ ಉಜ್ಜ್ವಲ ದೇಶಾಭಿಮಾನಿ. ತನ್ನ ದೇಶದ ರಕ್ಷಣೆಯ ಸಲುವಾಗಿ ಒಂದನೆಯ ಮಹಾಯುದ್ಧದಲ್ಲಿ ಶತ್ರುಗಳ ವಿರುದ್ಧ ಕ್ಲೋರೀನ್ ಮತ್ತು ಮಸ್ಟರ್ಡ್ ಅನಿಲಗಳ ಪ್ರಯೋಗದ ಮುಂದಾಳುತನ ವಹಿಸಲು ಹಿಂಜರಿಯಲಿಲ್ಲ. ಪರಾಜಿತವಾದ ಜರ್ಮನಿಯ ಮೇಲೆ ಯುದ್ಧದಲ್ಲಾದ ಅಪಾರ ನಷ್ಟವನ್ನು ಭರಿಸಲು ದೊಡ್ಡ ಮೊತ್ತದ ದಂಡ ವಿಧಿಸಲಾಯಿತು. ಪರಿಹಾರ ಧನವನ್ನು ಕೂಡಿಸುವ ಸಲುವಾಗಿ ಈತ ಸಮುದ್ರದ ನೀರಿನಿಂದ ಚಿನ್ನ ತೆಗೆಯುವ ಸಾಹಸಕ್ಕೆ ಮುಂದಾದ. ಜಯಶೀಲನಾಗಲಿಲ್ಲ. 1933ರಲ್ಲಿ ಹಿಟ್ಲರ್ ಜರ್ಮನಿಯ ಸರ್ವಾಧಿಕಾರಿಯಾದಾಗ ಇವನು ಹಿಂದೆ ಮಾಡಿದ ಯಾವ ಸಾಧನೆಗಳೂ ಗಣನೆಗೆ ಬಾರಲಿಲ್ಲ. ಅವನು ಯಹೂದಿಯೆಂಬ ಒಂದೇ ಕಾರಣಕ್ಕಾಗಿ ದೇಶಭ್ರಷ್ಟನಾಗಬೇಕಾಯಿತು. ಇಂಗ್ಲೆಂಡಿಗೆ ಹೋದ ಇವನಿಗೆ ಒಂದನೆಯ ಮಹಾಯುದ್ಧದಲ್ಲಿ ಶತ್ರುವಾಗಿದ್ದ ನಾಡಿನಲ್ಲಿರಲು ಮನಸ್ಸು ಬಾರದೆ ಅನತಿ ಕಾಲದಲ್ಲೇ ಇಟಲಿಗೆ ತೆರಳುವಾಗ ಬಾಸೆಲ್ ಬಳಿ ಅದೂ ತನ್ನ ಕೃತಘ್ನ ತಾಯ್ನಾಡಿಗೆ ಕೆಲವೇ ಮೈಲುಗಳ ದೂರದಲ್ಲಿ ಹೃದಯ ಸ್ತಂಭನದಿಂದ ನಿಧನನಾದ. (ಎಚ್.ಜಿ.ಎಸ್.)