ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲುಮಡ್ಡಿ

ಹಾಲುಮಡ್ಡಿ ಸೈಮಾರುಬೇಸೀ ಕುಟುಂಬದ ಐಲಾಂತಸ್ ಮಲಬಾರಿಕ ಪ್ರಭೇದದ ಮರ. ಪಶ್ಚಿಮ ಘಟ್ಟದ ಮಲೆನಾಡಿನ, ನಿತ್ಯಹರಿದ್ವರ್ಣದ ತೇವಮಯ ಕಾಡುಗಳಲ್ಲಿ ಕಂಡುಬರುತ್ತದೆ. ಪರ್ಣಪಾತಿ ಮರ. ಫೆಬ್ರವರಿ-ಮಾರ್ಚ್‍ನಲ್ಲಿ ಹೂಮೂಡಿ, ಕಾಯಿ ಏಪ್ರಿಲ್-ಮೇನಲ್ಲಿ ಪಕ್ವವಾಗುವುವು. ಇದರಿಂದ ಬರುವ ರಾಳವೇ ಸುವಾಸನೆಯುಳ್ಳ ಹಾಲುಮಡ್ಡಿ ಧೂಪ. (ಎ.ಕೆ.ಎಸ್.)