ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾವರ್ತ್, ವಾಲ್ಟರ್ ನಾರ್ಮನ್

ಹಾವರ್ತ್, ವಾಲ್ಟರ್ ನಾರ್ಮನ್ 1883-1950. ಇಂಗ್ಲಿಷ್ ರಸಾಯನವಿe್ಞÁನಿ, ಕಾರ್ಬೊಹೈಡ್ರೇಟುಗಳು ಮತ್ತು ಜೀವಸತ್ತ್ವ ಕ್ಷೇತ್ರಗಳಲ್ಲಿ ಸಂಶೋಧನೆ. ಈತನ ಮೊದಲ ಶಿಕ್ಷಣ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ. ಗಾಟಿಂಗೆನ್ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ. ಅಲ್ಲಿ ಆಟ್ಟೋ ವಲಾಕ್ (1847-1931) ಎಂಬ ರಸಾಯನವಿe್ಞÁನಿಯ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಗಳಿಸಿದ (1910). ಶರ್ಕರಗಳ ಅಧ್ಯಯನದ ಆದ್ಯ ಪ್ರವರ್ತಕ ಎಮಿಲ್ ಫಿಷರ್ (1852-1919) ಎಂಬವನ ಸಂಶೋಧನೆಗಳನ್ನು ಹಾವರ್ತ್ ಮುಂದುವ ರಿಸಿದ. ಒಂದು ಶರ್ಕರದ (ಗ್ಲೂಕೋಸ್, ಫ್ರಕ್ಟೋಸ್, ಗ್ಯಾಲಕ್ಟೋಸ್, ಸುಕ್ರೋಸ್, ಮಾಲ್ಟೋಸ್, ಲ್ಯಾಕ್ಟೋಸ್ ಇತ್ಯಾದಿ) ಅಣುರಚನೆಯನ್ನು ಬೆನ್ಸೀನ್ ಉಂಗುರದಂತೆ ಮೂರು ಆಯಾಮಗಳಲ್ಲಿ ಚಿತ್ರಿಸಬಹುದು. ಉಂಗುರದಲ್ಲಿರುವ ಕಾರ್ಬನ್ ಪರಮಾಣುಗಳನ್ನು ಬರೆಯಬೇಕಾಗಿಲ್ಲ. ಅವುಗಳಿಗೆ ಲಗತ್ತಾಗಿರುವ ಊ ಮತ್ತು -ಔಊ ಗುಚ್ಛಗಳನ್ನು ಉಂಗುರದ ಸಮತಲಕ್ಕೆ ಲಂಬವಾಗಿ ಮೇಲೆ ಅಥವಾ ಕೆಳಗೆ ಸಂದರ್ಭಾನುಸಾರ ಬರೆಯತಕ್ಕದ್ದು. ಇಂಥ ಚಿತ್ರೀಕರಣದಿಂದ ಶರ್ಕರದ ರಾಸಾಯನಿಕ ಗುಣಗಳಿಗೆ ಸಮರ್ಪಕ ವಿವರಣೆ ನೀಡಬಹುದು. ಈ ಅಣುರಚನಾ ವಿನ್ಯಾಸಗಳಿಗೆ ಹಾವರ್ತ್‍ರಚನೆಗಳು ಎಂದು ಹೆಸರಾಯಿತು. ಈ ವಿನ್ಯಾಸದಲ್ಲಿ ಷಟ್ಕೋನಾಕೃತಿಯ ಐದು ಮೂಲೆಗಳಲ್ಲಿ ಕಾರ್ಬನ್ ಪರಮಾಣುಗಳೂ ಮತ್ತೊಂದು ಮೂಲೆಯಲ್ಲಿ ಆಕ್ಸಿಜನ್ ಪರಮಾಣುವೂ ಇರುತ್ತವೆ. ವಾಸ್ತವವಾಗಿ ಇದು ಪಿರಾನ್ ಎಂದು ಕರೆಯುವ ವಿಷಮಚಕ್ರೀಯ ಹೈಡ್ರೊಕಾರ್ಬನ್. ಶರ್ಕರಗಳ ಹೆಸರಿನ ಮುಂದೆ “ಓಸ್” ಪ್ರತ್ಯಯವಿರುವುದರಿಂದ ಈ ಬಗೆಯ ಚಿತ್ರೀಕರಣವನ್ನು “ಪಿರನೋಸ್ ಉಂಗುರ ರಚನೆಗಳು” ಎನ್ನುವುದು ವಾಡಿಕೆ. ಇಂದೂ ಇವು ಪ್ರಸ್ತುತ. ಪಾಲಿಸ್ಯಾಕರೈಡ್‍ಗಳಾದ ಪಿಷ್ಟ, ಸೆಲ್ಯುಲೋಸ್‍ಗಳ ರಚನೆಯನ್ನು ಹೀಗೆಯೇ ಸೂಚಿಸಲು ಸಾಧ್ಯ. ಬಿ ಜೀವಸತ್ತ್ವದ ಅಣುರಚನೆಯೂ ಶರ್ಕರಗಳಂತೆ ಎಂದು ಇವನು ತೋರಿಸಿದ. ಅದನ್ನು ಸಂಶ್ಲೇಷಿಸಿದ ಕೀರ್ತಿ (1934) ಇವನಿಗೇ ಸಲ್ಲುತ್ತದೆ. ಅಲ್ಲಿಯ ತನಕ ಅದನ್ನು ಸಿಟ್ರಸ್ ಸಸ್ಯವರ್ಗಕ್ಕೆ ಸೇರಿದ ಹಣ್ಣುಗಳಾದ ನಿಂಬೆ, ಮಾದಲ, ಕಿತ್ತಳೆ, ಮೋಸಂಬಿಗಳಿಂದ ಪಡೆಯುವ ವಾಡಿಕೆಯಿತ್ತು. ಅದನ್ನು ಪ್ರಯೋಗಶಾಲೆಯಲ್ಲಿ ಸಂಶ್ಲೇಷಿಸಿ ಅಸ್ಕಾರ್ಬಿಕ್ ಆಮ್ಲ ಎಂದು ಇವನು ಹೆಸರಿಸಿದ. ಈ ಎಲ್ಲ ಸಂಶೋಧನೆಗಳಿಗಾಗಿ ಪಾಲ್ ಕಾರೆರ್ (1889-1971) ಪ್ರಶಸ್ತಿಯನ್ನು (1937) ಹಂಚಿಕೊಂಡ. ಹತ್ತು ವರ್ಷಗಳ ತರುವಾಯ ನೈಟ್‍ಹುಡ್ ಗೌರವವೂ ಸಂದಿತು. (ಎಚ್.ಜಿ.ಎಸ್.)