ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪ-ಚರಿತ್ರ ಈ ಮಾದರಿಯ ಶ್ರೇಷ್ಠತಮ ಮಹಿಮರಲ್ಲಿ ನಮ್ಮ ಚರಿತ್ರ ನಾಯಕ ರಾದ ಶ್ರೀನಿಂಬರಗಿ ಮಹಾರಾಜರವರು ಒಬ್ಬರು. * ದೇವರು ರಾಮ ಆಗಿ ಬಂದ ; ಕೃಷ್ಣ ಆಗಿ ಬಂದ; ನಿಂಬರಗಿ ಮಹಾರಾಜ ಆಗಿ ಬಂದ ಎಂದು ಉಮದಿಯ ಸುವಿಖ್ಯಾತರಾದ ಶ್ರೀಭಾವುಸಾಹೇಬ ಮಹಾರಾಜ ರವರು ಅವರನ್ನು ಕುರಿತು ಹೇಳುತ್ತಿದ್ದರು. ಇಂಥ ಹಿರಿಮೆ ಅವರದು. ಆದರೆ ಶ್ರೀನಿಂಬರಗಿ ಮಹಾರಾಜರವರು ತಮ್ಮ ಹಿರಿಮೆಯನ್ನು ಅತಿಯಾಗಿ ಗುಪ್ತವಾಗಿ ಇರಿಸಿದ್ದರಿಂದ ಅವರ ಯೋಗ್ಯತೆಯು ಅವರ ಜೀವದ ಗೆಳೆಯ ರಿಗೂ ಕೂಡ ತಿಳಿದಿರಲಿಲ್ಲ. ಶ್ರೀ ಸಮರ್ಥ ರಾಮದಾಸರು ಉಸುರಿದ ಮೇರೆಗೆ - ವಿಪುಲ ಧನವಿದ್ದರೂ ಅದು ಗುಪ್ತವಾಗಿ ಇದ್ದ ಮೂಲಕ ಬರಿ ಬಾಹ್ಯ ಆಕಾರದ ಅರಿವು ಇದ್ದವರಿಗೆ ಅದು ತಿಳಿಯುವದೆಂತು? ? ಶ್ರೀ ಮಹಾರಾಜರವರು ತಮ್ಮ ತಪೋಬಲದಿಂದ ಅಂದು ಜೀರ್ಣವಾದ ಅತ್ಮಜ್ಞಾನವನ್ನು ಮರಳಿ ಉದ್ಧರಿಸಿ, ಅದರಲ್ಲಿ ನವಚೈತನ್ಯವನ್ನು ತುಂಬಿ ದರು. ಅವರು ಅಜ್ಞಾತವಾಗಿ ನೆಟ್ಟ ಆತ್ಮಜ್ಞಾನವೃಕ್ಷವು ಬೆಳೆದು ಮುಂದದಕ್ಕೆ ಹೂ-ಹಣ್ಣುಗಳು ಬಂದಂತೆ, ಅವರ ನಿಜವಾದ ಹಿರಿಮೆಯು ಜಗತ್ತಿಗೆ ತಿಳಿಯಬಹುದು. ಅಲ್ಲಿಯವರೆಗೆ ಅವರ ಅಲ್ಪ ಪರಿಚಯವಾದರೂ ಕನ್ನಡಿಗರಿಗೆ ಆಗಲಿ, ಭಾವಿಕ ಕನ್ನಡಿಗರ ಬಗೆಯಾದರೂ ಅವರೆಡೆಗೆ ಹೊರಳಲಿ ! ಅದರಲ್ಲಿ ಅವರ ಬಗೆಗೆ ಪ್ರೀತ್ಯಾದರಗಳು ಮೊಳೆಯಲಿ, ಬೆಳೆಯಲಿ ! ಅವರು ಉನ್ನತ ಜೀವನವನ್ನು ಬಾಳಲೆಳಸಲಿ ! ಬಯಸಿ ಮುಂದಿನ ಅಲ್ಪ ಪ್ರಯತ್ನವನ್ನು ಮಾಡಲಾಗಿದೆ (9) ಎಂದು ಶ್ರೀನಿಂಬರಗಿ ಮಹಾರಾಜರವರು ಸುಮಾರು ಸನ್ ೧೭೮೭ ರಲ್ಲಿ ಜನಿಸಿದರು. ಅವರು ಜನ್ಮವೆತ್ತುದು ವೀರಶೈವ ಜ್ಞಾತಿಯಲ್ಲಿಯ ನೀಲವಾಣಿ ಯೆಂಬ ಉಪಜಾತಿಯಲ್ಲಿ, ಮಿಸಲಕರ ಎಂಬುದು ಅವರ ಕುಲನಾಮವು. ಅವರ ಜನ್ಮನಾಮವು ರಾಶಿಯ ಮೇಲಿಂದ ಇಡಲಾದುದು ನಾರಾಯಣ ಇಲ್ಲವೆ ನಾಗಪ್ಪ ಎಂಬುದಿತ್ತು. ಅವರ ಶಿಷ್ಯರು ಮಾತ್ರ ಅವರನ್ನು ನಾರಾಯಣರಾವ ಇಲ್ಲವೆ ಭಾವುಸಾಹೇಬ ಮಹಾರಾಜ ಎಂದು ಕರೆಯು ತಿದ್ದರು, ಅವರನ್ನು ಜನರು ಗುರುಲಿಂಗಜಂಗಮ ಮಹಾರಾಜ ಎಂದೂ