ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ ಸುಧೆ ಮೀರಿ ನಲಿದೊಲಿದವರು, ನೂರು ಹರಕೆಯ ಸುರಿಯ ಅಮಿತ ಐಸಿರಿಯಲ್ಲಿ ನಲಿಯುತಿಹುದು. ಹಿರಿಯರಾಣತಿಯಲ್ಲಿ ಚರಿಪ ಕಿರಿಯನು ತಾನು ಅವರ ಸೇವೆಯ ಸತತ ಮಾಳ್ವ ನರನು ಪರಮ ಸಂತತಿ-ಸಂಪಪಾಯು-ಬಲ-ಕೀರುತಿಯ ಬಿಡದೆ ಅಡಿಗಡಿಗವನು ಪಡೆಯುತಿಹನು ತನ್ನ ಮೇಲೆಲ್ಲರೊಲವನು ಕರೆಯುತಿರಲೆಂದು ಎಳಸುವವ : ಕರಣಿ' ಯನು ಕರೆಯಬೇಕು ತನ್ನ ಕರಣಿಯ ಹೊರತು, ಕರಗದಂತಃಕರಣ ಅದನುಳಿದು ಒಲವೆನಿತು ದೊರೆಯಬೇಕು ? ಪರರ ಕೆಲಸವ ತಾನು, ಪರಮ ತತ್ಪರತೆಯಿಂ ಅವರು ಹೇಳುವ ಮುನ್ನ ಮುಗಿಸುತಿಹುದು, ಪರರ ಕೈಯಿಂ ತಾನು ನಿರುತದಿಂ ತೆಗೆದದನು ಅಧಿಕ ಕುಶಲತೆಯಿಂದ ಸಾಗಿಸುವದು. ಉಚ್ಚ ಕೆಲಸವನುಳಿದು ನೀಚ ಕೆಲಸವನೆಸಗೆ ಅಂತರಂಗವು ಬೇಗ ಅರಳುತಿಹುದು. ನೀಚ ಕೆಲಸಗಳಲ್ಲಿ ನಾಚದವ ತಾ ವಿರಲ. ಒಲವಿಗಾಗದರೆಡೆಗೆ ಹೊರಳುತಿಹುದು. ಇಂತು ಮೈಮನದಿಂದ ಅಂತಮಿತ ಧನದಿಂದ ಅನುವರಿತು ಕರಣಿಯನು ಮಾಡುತಿಹುದು. | 40 | || 30 || || ೪೨ || || 03 || ಅಂತರಂಗವು ಒಲಿಯೆ, ಇರುವ ಮಮತೆಯು ಬಲಿಯ, ನಲಿವು ಕಡಲಲಿ ಅಲೆದು ಆಡುತಿಹುದು,