ಈ ಪುಟವನ್ನು ಪರಿಶೀಲಿಸಲಾಗಿದೆ
ಚಿರಸ್ಮರಣೆ
೧೦೧

ಒಂದು ನಿಮಿಷ ಸುಮ್ನನಿದ್ದು ನಂಬಿಯಾರರು ಆಜ್ನ್ಹೆ ಇತ್ತರು:
"ಇವತ್ತು ಪುರುಸೊತ್ತಿಲ್ಲ,ನಾಳೆ ಬರಬೇಕೂಂತ ಹೇಳು."
"ಹೂಂ ಒಡೆಯ.ಎಷ್ಟೋತ್ತಿಗೆ ಬರೋದಕ್ಕೆ ಹೇಳ್ಣಿ?"
ಜಮೀನ್ದಾರರು ಸ್ವರವೇರಿಸಿದರು:
"ನಾಯಿ ಮಗನೆ!ಅದೇನೋ ಹಾಗೆಂದರೆ?ಎಷ್ಟೊತ್ತಿಗೆ---ಅಂತೆ,ಭೇಟಿಗೆ ಸಮಯ ಗೊತ್ತುಮಾಡೋದಕ್ಕೆ ಅವರು ಮಹಾರಾಜರೇನೋ ಹೋಗು.....ಬೆಳಿಗ್ಗೆನೇ ಬಂದು ಇಲ್ಲಿ ಕಾದಿರ್ಬೇಕೂಂತ ಹೇಳು!"
ಆಳು ಬಾಗಿಬಾಗಿ ಹೊರಟುಹೋದ.ನಂಬಿಯಾರರು ಠೀವಿಯಿಂದ ಮಾಸ್ತರತ್ತ ತಿರುಗಿ ಸ್ವರ ಬದಲಾಯಿಸಿ ಹೇಳಿದರು:
"ಸೊಳೇ ಮಕ್ಕಳು ಜಗಳಾಡ್ತಾರೆ:ಆಮೇಲೆ ರಾಜಿ ಮಾಡಿಸ್ಕೊಡಿಂತ ಇಲ್ಲಿಗೆ ಬರ್ತಾರೆ."
ಆಳನ್ನು ಉದ್ದೇಶಿಸಿ ಮಾತನಾಡಿದ ಧ್ವನಿಗಿಂತ ಆತ್ಮಪ್ರಶಂಸೆಯ ಈ ಸ್ವರ ಭಿನ್ನವಾಗಿತ್ತು. 'ಒಬ್ಬೊಬ್ಬರಿಗೋಸ್ಕರ ಒಂದೊಂದು ರೀತಿ ಗೋಟಲು' ಎಂದುಕೊಂಡರು ಮಾಸ್ತರು.ಮೂಂದಕ್ಕೆ ಇನ್ನೂ ರಾಗವಾಗಿ ನಂಬಿಯಾರರೆಂದರು:
"ಜಮೀನ್ದಾರ ರೈತರಿಗೆಲ್ಲ ತಂದೆ ಇದ್ದ ಹಾಗೆ,ಜಗಳ ಆಡಿಕೊಂಡು ಇಲ್ಲಿಗೆ ಅಲ್ಲದೆ ಬೇರೆಲ್ಲಿಗೆ ಬರಬೇಕು ಹೇಳಿ?....."
....ಸಂದರ್ಶನವನ್ನು ಇನ್ನೂ ಉದ್ದ ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು, ಮಾಸ್ತರು ಹೊರಡಲು ಸನ್ನದ್ದರಾಗಿ ಅತ್ತಿತ್ತ ನೋಡಿದರು.ಮಾಸ್ತರ ಇಂಗಿತವನ್ನು ನಂಬಿಯಾರರು ಊಹಿಸದಿರಲಿಲ್ಲ.ಅವರ ಅಳನ್ನು ಕರೆದರು:
"ಏ ಇವನೇ,ಬಾ ಇಲ್ಲ!"
ಆಳು ಬಂದಾಗ ಅವರು ಆದೇಶವಿತ್ತರು:
"ಎರಡು ದೊಡ್ಡ ಪಪ್ಪಾಯಿಹಣ್ಣು ತಗೋಂಡು ಮಾಸ್ತರ ಜತೇಲಿ ಹೋಗು." ಆದರೆ ಮಾಸ್ತರಿಗೆ ಮಾತುಕತೆಯಿಂದಲೇ ಹೊಟ್ಟೆ ತುಂಬಿತ್ತು.ಪಪ್ಪಾಯಿ ಹಣ್ಣುಗಳು ಅವಶ್ಯವೆನ್ನಿಸಲಿಲ್ಲ. ಉಡುಗೊರೆ ಇಲ್ಲದೆ,ಬಂದ ಹಾಗೆಯೇ ಹಿಂತಿರುಗಲು ಅವರು ಯತ್ನಿಸಿದರು:
"ಬೆಡಿ.ಸುಮ್ಮನೆ ಯಾಕೆ?ದಯವಿಟ್ಟು ಬೇಡಿ."
ನಂಬಿಯಾರರು ಎದ್ದುನಿಂತು,'ಸುಮ್ಮನಿರಿ'ಎನ್ನುವಂತೆ ಆತ್ಮೀಯತೆಯಿಂದ ಕೈಬೀಸಿ"ತಗೊಂಡು ಬಾರೋ. ಚೆನ್ನಾಗಿರೋದು,ನೋಡಿ ಆರಿಸಿ ತಾ"ಎಂದರು.
ಹೊರಕ್ಕೆ ಹೊರಟ ಮಾಸ್ತರು ಒಳಬಾಗಿಲಿನತ್ತ ಒಮ್ಮೆ ದೃಷ್ಟಿಬೀರಿದರು.ಅಲ್ಲಿ