ಈ ಪುಟವನ್ನು ಪರಿಶೀಲಿಸಲಾಗಿದೆ

೧೦೪

ಚಿರಸ್ಮರಣೆ

   "ಇನ್ನು ಆ ಅರಸು ಕುಮಾರನಿಗೆ ಹೆಚ್ಚಿನ ಪಾಠ ಬೇರೆ  ಹೇಳಿಕೊಡಬೇಕೇನು?ಸರಿ! ಸರಿ!"
ಎಂದ ಚಿರುಕಂಡ.
ಆದರೆ ಮಾಸ್ತರು ಶಾಂತವಾಗಿದ್ದರು.
"ಆಗೋದಿಲ್ಲಾಂತ ಹೇಳೋದಕ್ಕಾಗ್ತದ ಅಪ್ಪು? ವಿಶ್ವಸ್ಥ ಸಮಿತಿ ಅನ್ನೋದೆಲ್ಲ ಹೆಸರಿಗೆ. ನಂಬಿಯಾರರಿಗೆ ಬೇಡ ಅನಿಸಿದ್ರೆ ನನ್ನನ್ನು ಕೆಲಸದಿಂದ ತೆಗೆದು ಹಾಕಲೂಬಹುದು."
ಹುಡುಗರು ಮಾತನಾಡಲಿಲ್ಲ.
ಚಿರುಕಂಡ ವರ ಕೇಳುವವನಂತೆ ಹೇಳಿದ:
"ನೀವು ದಿನಾ ಅಲ್ಲಿಗೆ ಹೋಗ್ಬೇಡಿ ಸರ್. ಬೆಳಗ್ಗೆ ಬೇಗ್ನೆ ಇಲ್ಲಿಗೇ ಒಂದು ಬಿಡೂಂತ ಹೇಳಿ."
ಮಾಸ್ತರು ಮುಗುಳುನಕ್ಕರು. ಸ್ವಲ್ಪ ದಿನ ಹೋಗುತ್ತಿದ್ದು ಕ್ರಮೇಣ ಆ ಹುಡುಗನನ್ನು ಶಾಲೆಗೇ ಬೇಗನೆ ಕರೆಸಬೇಕೆಂಬುದು ಅವರ ಯೋಚನೆಯೂ ಆಗಿತ್ತು.
ಜಮೀನ್ದಾರರ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಅತ್ಯಂತ ಸ್ವಾರಸ್ಯಕರವಾಗಿದ್ದ ಅಂಶ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ್ದು. ಅದರ ವಿವರವನ್ನು ಹೇಳಿ ಮಾಸ್ತರೂ ನಕ್ಕರು; ಕೇಳಿ ಹುಡುಗರೂ ನಕ್ಕರು.
ಅಪ್ಪು ಉತ್ಯಾಹಗೊಂಡು ಹೇಳಿದ:
"ಕಯ್ಯೂರಿಗೆ ಬೇಗ್ನೆ ಗ್ರಾಮ ಪಂಚಾಯಿತಿ ಬರೋಹಾಗೆ ಮಾಡ್ಬೇಕು ಸರ್."
"ಅದಕ್ಕಿನ್ನೂ ರೈತರು ಸಿದ್ಧವಾಗ್ಬೇಕು."
"ಆಮೇಲೆ ಶಾಲೇನ ಪಂಚಾಯಿತಿಯವರೇ ನಡೆಸ್ಬಹುದು, ಅಲ್ವ?"
"ಹೌದು. ಆದರೆ ಅವರೆಲ್ಲ ಅಷ್ಟು ಸುಲಭವಾಗಿ ಕೆಟ್ಟವರ ಕೈಗೆ ಅಧಿಕಾರ ಕೊಡ್ತಾರಾ?"
ನಂಬಿಯಾರರ ಕೈಯಿಂದ ರೈತರು ಅಧಿಕಾರ ಪಡೆಯುವುದು ಸುಲಭವಲ್ಲ ಎಂದು ಅಪ್ಪುವಿಗೆ ಚೆನ್ನಾಗಿ ಗೊತ್ತಿತ್ತು. ಆತನೆಂದ:
"ಹೂಂ. ಗ್ರಾಮ ಪಂಚಾಯಿತಿಯಿಂದೇನೂ ಪ್ರಯೋಜನವಿಲ್ಲ. ಹೋರಾಟವೇ ಸರಿಯಾದ ಹಾದಿ."
ಅಪ್ಪುವಿನ ಮಾತಿನ ಸರಣಿಯನ್ನು ತಿದ್ದುವವನಂತೆ ಚಿರುಕಂಡ ಹೇಳಿದ:
"ಕೊನೇದಾಗಿ ಹೋರಾಟ ಆಗಿಯೇ ಆಗ್ತದೆ. ಆದರೆ ಗ್ರಾಮಪಂಚಾಯಿತಿ