ಈ ಪುಟವನ್ನು ಪರಿಶೀಲಿಸಲಾಗಿದೆ

೪೩

ಚಿರಸ್ಮರಣೆ


  "ಹೊಲದಲ್ಲಿ ಭತ್ತದ ಸಸಿ ಸರಿಯಾಗಿ ಬೆಳೀದೇ ಇದ್ರೆ, ಯಾಕೆ ಅಂತ
ಯೋಚಿಸ್ತೇವೆ ಅಲ್ವೇನಪ್ಪ?"
ಹೌದು."

"ಹಾಗೆ ಯೋಚಿಸಿ. ನೀರು ಜಾಸ್ತಿಯಾಗಿದ್ರೆ ಕಡಿಮೆ ಮಾಡ್ತೇವೆ.ಕಡಿಮೆಯಾಗಿದ್ರೆ
ನೀರು ಹಾಯಿಸ್ತೇವೆ. ಯಾಕೆ ಬೆಳೆ ಸರಿಯಾಗಿ ಬೆಳೀಲಿಲ್ಲ ಅಂತ ಯೋಚನೆ
ಮಾಡೋದ್ರಿಂದ, ಕಾರಣ ಹೊಳೀತದೆ. ಅದು ಗೊತ್ತಾದ ಮೇಲೆ ಕೆಲಸ..."

ಚಿರುಕಂಡ ಹೌದೆಂದು ತಲೆಯಾಡಿಸಿದ. ಅಪ್ಪು ಬಾಯಿ ತೆರೆದು ಪ್ರತಿಯೊಂದು
ಮಾತನ್ನೂ ತಿಳಿದುಕೊಳ್ಳಲೆತ್ನಿಸುತ್ತ ಕಿವಿಗೊಟ್ಟು ಕೇಳಿದ.
ಅಷ್ಟರಲ್ಲಿ ಒಬ್ಬ ರೈತ ಎಳನೀರುಗಳ ಗೊಂಚಲನ್ನು ಹೊತ್ತು ತಂದ.
"ಒಂದೆರಡು ತಾ ಅಂದ್ರೆ ಇಷ್ಟೊಂದು ತಂದಿಯಲ್ಲೋ.ಹೊಟ್ಟೆಗೇನೂ ಹಾಕದೆ
ಬರೇ ಎಳನೀರು ಕುಡಿಸಿ ಕಳಿಸ್ಬೇಕೂಂತ ಮಾಡಿದೀಯೇನು?"
–ಧಾಂಡಿಗ ಕಪಟ ಗಾ೦ಭೀರ್‍ಯ ತೋರುತ್ತ ಆಳವಾದ ದಪ್ಪನಾದ ಸ್ವರದಲ್ಲಿ ಹೇಳಿದ.
ಎಳನೀರು ತಂದ ರೈತನಿಗೇನೂ ಆ ಮಾತು ನಾಟಿದಂತೆ ತೋರಲಿಲ್ಲ. ಆತ ಧಾಂಡಿಗನನ್ನೊಮ್ಮೆ ನೋಡಿ ಹೇಳಿದ:

"ಯಾವಾಗಲೂ ನಿನಗೆ ಹೊಟ್ಟೇದೊಂದೇ ಯೋಚ್ನೆ."
"ತಪ್ಪೇನೋ ಅದರಲ್ಲಿ? ಹೋದಸಲವೇ ಪಂಡಿತರು ಹೇಳ್ಲಿಲ್ವ-ಹೊಟ್ಟೆ
ಪ್ರಶ್ನೇನೆ ಮುಖ್ಯ ಅಂತ?"
ಧಾಂಡಿಗನ ಆ ಮಾತಿಗೆ ಎಲ್ಲರೂ ನಕ್ಕರು.
ರೈತ ಎಳನೀರುಗಳ ತುದಿ ಕತ್ತರಿಸಿ ಕುಡಿಯಲು ಸಿದ್ಧಗೊಳಿಸುತ್ತ ಹೇಳಿದ:
"ನೋಡಿ ಪಂಡಿತರೆ, ಧಾಂಡಿಗ ಸೋಮಾರಿಯಾಗ್ತಿದ್ದಾನೆ. ಹೊಟ್ಟೆ ಪ್ರಶ್ನೆ
ಬಟ್ಟೆ ಪ್ರಶ್ನೆ ಅಂತ ಮಾತಾಡ್ಕೊಂಡು ಆ ಹೋಟ್ಲಲ್ಲಿ ಕುತಿರ್‍ತಾನೆಯೆ ಹೊರತು ಮೂರು
ಕಾಸಿನ ಕೆಲಸ ಮಾಡೋದಿಲ್ಲ." ರೇಗಿದವನಂತೆ ಧಾಂಡಿಗನೆಂದ:
"ಸಾಕು, ಜಾಸ್ತಿ ಬಿಚ್ಬೇಡ !"
ಪಂಡಿತರು ಸ್ವತಃ ತಾವೇ ಹುಡುಗರಿಗೆ ಒಂದೊಂದು ಎಳನೀರು ಕೊಟ್ಟರು.
ತೆಗೆದುಕೊಳ್ಳಲು ಹಿಂಜರಿದಾಗ, ಮಾಸ್ತರರ ಪ್ರೋತ್ಸಾಹದ ಸಂಜ್ಞೆ ನೋಟ ಅವರ
ನೆರವಿಗೆ ಬಂತು.
ಧಾಂಡಿಗ ಒಂದೇ ಗುಟುಕಿಗೆ ಎಳನೀರು ಕುಡಿದು, ಅದರೊಳಕ್ಕೆ ಬೆರಳು ಹಾಕಿ