ಈ ಪುಟವನ್ನು ಪರಿಶೀಲಿಸಲಾಗಿದೆ

*.* - జరి:రH "ಹೊಲದಲ್ಲೇ ಇದ್ದಾನ ಇನ್ನೂ?"
"ಹೊಲದಿಂದ ಬೆಳಿಗ್ಗೆನೇ ಬಂದು, ಅವರನ್ನ ಕರಸೊಂಡಿದ್ದಾರೆ."
ಯಾರು ಎಂಬುದನ್ನು ಚಿರುಕಂಡ ಊಹಿಸಿದರೂ ವಿಷಯ ಸ್ಪಷ್ಟವಾಗಲೆಂದು ಕೇಳಿದ: "ಜಮೀನ್ದಾರರೇ?"
"ಬೇರೆ ಯಾರು?"
ಹೊಲದ ವಿಷಯವಿರಬೇಕು, ಆ ಎರಢು ಎಕರೆ ಭೂಮಿ ಅವರದೇ ಹಿರಿಯರಿಂದ ಬಂದುದು. ಆದರೆ ಚಿರುಕಂಡನ ತಂದೆ ತನ್ನ ಮದುವೆಯ ಕಾಲಕ್ಕೆ ಜಮೀನ್ದಾರರಿಂದ ಸಾಲ ಪಡೆದಿದ್ದ,ಆ ಭೂಮಿಯ ಆಧಾರದ ಮೇಲೆ ಸಂದಾಯಮಾಡುತ್ತ ಬಂದ ಹಣವೆಲ್ಲ ಜಮೀನಾರರ ಪ್ರಕಾರ ಬಡ್ಡಿಗೂ ಸರಿ ಹೋಗಿರಲಿಲ್ಲ.ಇವರದೊಂದು ಜೋಡಿ ಹೋದಿಗಳಿದ್ದುವು.ಒಮ್ಮೆ ಮಳೆಗಾಲದಲ್ಲಿ ಒಂದು ಹೋರಿ ನೀರಿನ ಪಾಲಾಯಿತು. ಉಳಿದುದಕ್ಕೆ ಜತೆಗಾರನನ್ನು ಕೊಳ್ಳಲು ಹಣವಿರಲಿಲ್ಲ. ಹೀಗಾಗಿ ಇನ್ನೊಂದು ಹೋರಿ ಜಮೀನ್ದಾರರ ಪಾಲಾಯಿತು. ಆದರೂ ಚಿರುಕಂಡನ ತಂದೆ, ಹೋರಿಗಳನ್ನು ಎರವಲು ಪಡೆದೇ ಸಾಗುವಳಿ ಮಾಡಿದ ಜಮೀನಾರರೇ ತಮ್ಮ ಹೋರಿಗಳನ್ನು ಆತನ ಉಪಯೋಗಕ್ಕೆ ಕೊಟ್ಟರು!....ಸಾಲ ಮಾತ್ರ ತೀರಲೇ ఇಲ್ಲ. ಅಂಥ ಸಂದರ್ಭದಲ್ಲಿ ಏನಾಗುತ್ತದೆಂಬುದು ಚಿರುಕಂಡನಿಗೆ ಗೊತ್ತಿತ್ತು , ಮಾಸ್ತರು ಅದನ್ನು ಹೇಳಿದ್ದರು, ಹಲವರ ಭೂಮಿ ಕೆಲವರ ಕೈಗೆ ಹೇಗೆ ಹೋಗುತ್ತದೆಂಬುದನ್ನು ಅವರು ವಿವರಿಸಿದ್ದರು. ಆಗ ಚಿರುಕೊಡನೇ ಹೇಳಿದ್ದ: "ನಮ್ಮ ಮನೆ ಕತೇನೂ ಸ್ವಲ್ಪ ಮಟ್ಟಿಗೆ ಹೀಗೇ ಇದೆ, ಸರ್.' ತಾನು ಕೇಳಿ ತಿಳಿದ ವಿಷಯಗಳನ್ನು ಪರಾಂಬರಿಸಲು ಬೇರೆಯವರ ಬದುಕಿನತ್ತ ನೋಡಬೇಕಾಗಿರಲಿಲ್ಲ, ತನ್ನ ತಾಯಿ ತಂದೆ ನಡೆಸುತ್ತಿದ್ದ ಬಾಳ್ವೆಯ ಹೋರಾಟವೇ–ಅದರಲ್ಲಿ ಅವರಿಗೆ ಆಗುತ್ತಿದ್ದ ಸೋಲೇ-ಒಳ್ಳೆಯ ನಿದರ್ಶನಗಳಾಗಿದ್ದುವು. ಜಮೀನ್ದಾರರ ದೊಡ್ಡ ಮನೆಯ ಚಾವಡಿಯ ಮುಂದೆ, ನಡುವಿಗೆ ಅಂಗವಸ್ತ್ರ ಸುತ್ತಿ, ಕೈಕಟ್ಟಿ, ಒಂದು ಅಂಗೈಯಿಂದ ಬಾಯಿ ಮುಚ್ಚಿಕೊಂಡು ದೈನ್ಯದ ಮೂರ್ತಿಯಾಗಿ ನಿಂತ ತಂದೆಯ ಚಿತ್ರವನ್ನು ಚಿರುಕಂಡ ಕಲ್ಪಿಸಿದ, ಆ ಕಲ್ಪನೆಯ ಫಲವಾಗಿ, ಆತನ ನರನಾಡಿಗಳಲ್ಲಿ ರಕ್ತ ವೇಗವಾಗಿ ಸಂಚರಿಸಿತು. ಮೆಲ್ಲನೆ ತಾಯಿಯ ಬಳಿಗೆ ಸರಿಯುತ್ತ ಆತನೆಂದ: