ಈ ಪುಟವನ್ನು ಪರಿಶೀಲಿಸಲಾಗಿದೆ
೬೬
ಚಿರಸ್ಮರಣೆ

ಪುತ್ರವಾತ್ಸಲ್ಯವನ್ನು ಅದಕ್ಕೆ ಕಾರಣವಾಗಿ ಕೊಡದೆ ಆಕೆ ಅಂದಿದ್ದಳು :
"ಇರೋ ಸಾಲ ಮತ್ತಷ್ಟು ಜಾಸ್ತಿಯಾಗಲೀಂತ ಮಾಡಿದ್ದೀರೇನು?"
"ಸಾಲದ್ದೇನು ಬಿಡು. ನಾವು ತೀರಿಸದೇ ಇದ್ದರೆ ದೊಡೊನ್ದನಾದೆಲೆ ಅವನೇ ತೀರ್ಮಾನಿಸುತ್ತಾನೆ."
ಆಗ ಅಕೆ ಕಣ್ಣೀರಿನ ಬಾಣ ಬಿಟ್ಟು ಹೇಳಿದ್ದಳು:
"ಇರೋ ಒಬ್ಬ ಕಂದ ಕಣ್ಣೆದುರಿಗಿದ್ದಾನೇಂತ ನಿಮಗೆ ನಿದ್ದೆ ಬರೋದಿಲ್ಲ, ಅಲ್ಲ?"
"ಬಿಡು ಅನ್ನೇ!" ಎಂದು ಹೇಳಿದ ತಂದೆ, ಮಗನನ್ನು ಓದಲು ಕಳುಹುವ ಯೋಚನೆಯನ್ನೆ ಬಿಟ್ಟುಕೊಟ್ಟ.
ಆ ತಾಯ ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಆ ಪ್ರೀತಿಯ ಕಾರಣದಿಂದಲೇ ಅವನ ಮೇಲೆ ರೇಗುತ್ತಿದ್ದಳು.
ಈ ವಿಪರೀತ ವರ್ತನೆಗಾಗಿ ಗಂಡ ಆಕೆಯನ್ನು ಟೀಕಿಸಿದರೆ, ಆತನ ಮೇಲೂ ಸಿಟ್ಟಾಗುತ್ತಿದ್ದಳು.
"ನನ್ನ ಒಡವೇನ್ನ ಹ್ಯಾಗೆ ನೋಡ್ಕೋಬೇಕು ಅನ್ನೋದು ನನಗೆ ಗೊತ್ತಿದೆ. ನೀವು ಸುಮ್ನಿರಿ!" ಎಂದು ಹೇಳಿ, ಆತ ತುಟಿ ತೆರೆಯದಹಾಗೆ ಮಾಡುತ್ತಿದ್ದಳು.
ಈ ದಿನ, ತಮ್ಮ ಇರುವಿಕೆಗೆ ಧಕ್ಕೆಯುಂಟುಮಾಡುವ ಸಂಕಟ ಒದಗಿದೆ ಎಂದು ಆಕೆಯ ಹೃದಯ ಬಿರುಕುಬಿಟ್ಟಿತ್ತು. ತನ್ನ ಅಸಹಾಯಕತೆಯನ್ನು ಮರೆಮಾಡಲು ಆಕೆ ಕೊಡ್ರೀಧದ ಮುಖವಾಡ ಧರಿಸಿದ್ದಳು. ಅಂಥ ದಿನವೇ ತನ್ನ ಕಂದಮ್ಮ ಬಳಿಯಲ್ಲಿರಲಿಲ್ಲವೆಂದು ಅವಳ ದುಗುಡ ಇಮ್ಮಡಿಸಿತ್ತು.
ಈಗ ಮಗನನ್ನು ಮಡಿಲಲ್ಲಿ ಒರಗಿಸಿಕೊಂಡು, ಆ ಮೈಯ ಶಾಖದಿಂದ ಮನಸ್ಸು ತಣಿಸುತ್ತ ಆಕೆ ಕುಳಿತಳು.
ಮಗ ಸೊರಗಿರುವನೆಂಬ ಯೋಚನೆಯಿಂದ ಒಂದು ಪ್ರಶ್ನೆ ಹುಟ್ಟಿತು;
"ಹೊಟ್ಟೆ ಹಸಿದಿದೆಯೇನೋ ಚಿರೂ?"
ಆದರೆ ಆ ಕ್ಷಣ, ಆತನ ಸುತ್ತಲೂ ಸುಳಿಯುತ್ತಿದ್ದ ಸಹಸ್ರ ಯೋಚನೆಗಳಲ್ಲಿ ಹೊಟ್ಟೆಯ ಹಸಿವಿಗೆ ಮಾತ್ರ ಸ್ಥಾನವಿರಲಿಲ್ಲ.
"ಇಲ್ಲಮ್ಮ."
"ಹಸಿವಾಗಿದ್ರೆ ಬಡಿಸ್ತೆನೆ."
"ಬೇಡ, ಅಪ್ಪ ಬರ್ಲಿ."
"ಅವರು ಬರೋದು ಎಷ್ಟು ಹೊತ್ತೊ?"