ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು

ಹೊಸ ಲೇಖನವನ್ನು ಪ್ರಾರಂಭ ಮಾಡುವ ಮುನ್ನ ಆ ವಿಷಯದ ಬಗ್ಗೆ ಈಗಾಗಲೇ ವಿಕಿಸೋರ್ಸಿದಲ್ಲಿ ಲೇಖನ ಇಲ್ಲವೆಂಬುದನ್ನು ಖಾತರಿ ಪಡಿಸಿಕೊಳ್ಳಿ. ವಿಕಿಸೋರ್ಸಿನ ಸರ್ಚ್ (ನಿಮ್ಮ್ ಎಡಕ್ಕಿರುವ ಮೆನು, ಸೈಡ್ ಬಾರ್ ನೋಡಿ) ವ್ಯವಸ್ಥೆ ಬಳಸಿ ನೀವು ಪ್ರಾರಂಭಿಸಬೇಕೆಂದಿರುವ ಲೇಖನ ವಿಷಯವನ್ನು ಹುಡುಕಿ ನೋಡಿ.

ಸರ್ಚ್ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ವಿಷಯಗಳು ಸಂಪಾದಿಸಿ

ಸರ್ಚ್ ಮಾಡುವಾಗ ತೀರ ಕನ್ನಡವಲ್ಲದ ಶಬ್ದಗಳ ಎಲ್ಲ ಬಳಕೆಗಳನ್ನೂ ಸರ್ಚ್ ಮಾಡಿ ನೋಡಿ. ಉದಾಹರಣೆಗೆ ನಾಗಾಲ್ಯಾಂಡ್ ಮತ್ತು ನಾಗಲ್ಯಾಂಡ್.

ಹೊಸ ಲೇಖನವನ್ನು ಪ್ರಾರಂಭಿಸುವುದು ಸಂಪಾದಿಸಿ

'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, "There is no page titled "<<ಲೇಖನದ ಹೆಸರು>>". You can create this page." ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.

ಗಮನಿಸಿ:

  • ಚಲನಚಿತ್ರ ಸಾಹಿತ್ಯದ ಲೇಖನ ಬರೆಯುವಾಗ ಲೇಖನದ ಹೆಸರು ಈ ಮಾದರಿಯಲ್ಲಿರಲಿ: <<ಚಲನಚಿತ್ರದ ಹೆಸರು>> - <<ಹಾಡಿನ ಮೊದಲ ಪದಗಳು>>

ಉದಾ: ಚಲಿಸುವ ಮೋಡಗಳು - ಜೇನಿನ ಹೊಳೆಯೊ ಹಾಲಿನ ಮಳೆಯೋ ಅಥವಾ ಚಲಿಸುವ ಮೋಡಗಳು - ಜೇನಿನ ಹೊಳೆಯೊ

  • ಯಾವುದೇ ಸಾಹಿತ್ಯದ ಪುಟ ಪ್ರಾರಂಭಿಸಿದರೂ, ಅದನ್ನು ಆಯಾ ವರ್ಗಕ್ಕೆ ಸೇರಿಸುವುದನ್ನು ಮರೆಯಬೇಡಿ (ಉದಾ: ಭಕ್ತಿಗೀತೆಗಳು, ಭಾವಗೀತೆಗಳು, ನಾಡಗೀತೆಗಳು, ಶಿಶುಸಾಹಿತ್ಯ, ಚಲನಚಿತ್ರ ಸಾಹಿತ್ಯ ಇತ್ಯಾದಿ).

ಎಲ್ಲಾ ವರ್ಗಗಳ ಪಟ್ಟಿಗೆ ಈ ಪುಟ ನೋಡಿ: Special:Categories