ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಗುಣ- ಸಂಪಾದನ ಚೆನ್ನ ಹಕ್ಕಿಯ ಕೊಂದು ತನ್ನ ನಾಯಿಗೆ ನೀಡಿ ನಾಯಿಯನ್ನೊಲವಿನಿಂ ಪೊರೆಯುತಿಹರು. ತನ್ನ ನಾಯಿಗೆ ದಯೆಯ, ಹಕ್ಕಿಗೆಯೇ ನಿರ್ದಯೆಯ ತೋರಿ ಪಾಪದ ಪಥದಿ ಸಾರುತಿಹರು. ಎಲ್ಲರೊಂದೆಡೆ ನೆರೆದು ಉಣಲು ಕುಳಿತಿರುವಲ್ಲಿ ಭೇದ ಭಾವವ ತಳೆದು ನೀಡುತಿಹರು. ಸಲ್ಲದೀ ನಡತೆಯಿಂ, ಹುಲ್ಲು ಮಾನವರೆಲ್ಲ ತಮ್ಮವರಿಗಪಾಯವನೆ ಮಾಡುತಿಹರು. ಇಂದು ಬರಬಂದುದರಿಂದ-ಮಿತ ಬಡಜನರು ಅನ್ನವಿಲ್ಲದೆ ಬಳಲಿ ಸಾಯ್ತರಲ್ಲ! ಇಂಥನಾಹುತಗಳವು ಜನರ ನಿರ್ದಯೆಯ ಫಲ ಇದರೊಳ್ಳಿನಿತು ಸಂದೇಹವಿಲ್ಲ. ೩೭. ದೇವರು ಕೊಟ್ಟಿದ್ದರಲ್ಲಿ ಸಮಾಧಾನ 11 352 11 ೧ ೫೭ ೧ || 88 pc || ಹೊಟ್ಟೆ ಯನು ಕೊಟ್ಟವನು ರೊಟ್ಟಿಯನ್ನು ಕೊಡುತಿಹನು ದೇವನಿದಕೆಂದಿಗೂ ತಪ್ಪನಯ್ಯ! ಕೊಟ್ಟು ದನ ಕೊಂಡುಂಡು ಬಿಟ್ಟು ದ ಬಳಿಸಿಕೊಂಡು ಪರರದರೆ ಬಯಕೆಯೆನು ತಪ್ಪಿಸಯ್ಯ. ಅಲ್ಲಗಳೆದಿದ್ದುದನು, ಇಲ್ಲದನಪೇಕ್ಷಿಸಲು ಇರುವದಳಿದಿರದುದೂ ದೊರೆಯದಯ್ಯ! ತೈಲ ತುಪ್ಪಗಳೆರಡು, ಬೈಲಾಗಿ ಕೈಯಲ್ಲಿ ಧೂಪದಾರತಿಯೊಂದೆ ಬರುವದಯ್ಯ. 1 ನಡೆಯುತಿಹರು. 1185711 11 2011