ದಾಸ ಸಾಹಿತ್ಯ/ಪ್ರಾಣೇಶದಾಸರು

(ಪ್ರಾಣೇಶದಾಸರು ಇಂದ ಪುನರ್ನಿರ್ದೇಶಿತ)

ಪ್ರಾಣೇಶದಾಸರು ಪ್ರಾಣೇಶದಾಸರು

ಅಂಗನಾಕುಲ ಶಿರೋಮಣಿ ಶ್ರೀಮಾ |
ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|
ಮಾರಾಂತಕ ಶಕ್ರಕರಾರ್ಚಿತೆ |
ವಾರಿಜಸದನೆ ಸಿರಿದೇವಿ |
ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |
ನೂರು ಸುರರರಸಿಯರೆಲ್ಲರು |
ಮೀರಿಧರುಷದಲಿ ಪದಪಾಡಿ |
ಹಸೆಯಬರೆದಿಹರೆಲೆ ನಾರಾಯಣನ ರಾಣೀ |
ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |
ನಿಷದ್ವಾಕ್ಯಗಳಿಂದ ತುತಿಸುವರು |
ವಸುಧೆಗಾನಂದ ಪಡಿಸಲು |
ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |
ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ |
ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|
ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |
ಹೀನರ ಸಂಹರಕೋಸುಗ ಶರ |
ಪಾಣಿಯಾಗಿಹಳೆಶ್ರುತಿವೇದ್ಯೆ |
ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ |
ಹಸೆಗೇಳು 5

ಅಗ್ರಪೂಜೆಯ ಮಾಡಿದಾ ಧರ್ಮಜ ತಾನುಅಗ್ರಪೂಜೆಯ ಮಾಡಿದಾ ಪರಾಜರಾಜರಗೂಡಿ ರಾಜಸೂಯದಿ ಧರ್ಮ-ರಾಜನು ಹರಿಗೆ ರಾಜರ ಸಭೆಯೊಳು ಅ.ಪಶುದ್ಧಾಚಮನ ಸಂಕಲ್ಪದಿಪಾದತೊಳೆದಿತ್ತಸದ್ಭಕ್ತಿಯಲಿ ಗಂಧಾಕ್ಷತೆ ವೇದವೇದ್ಯಗೆ 1ವಸನಾಭರಣದಿವ್ಯಕುಸುಮಧೂಪವು ದೀಪತೃಷೆನೈವೇದ್ಯವನಿತ್ತು ಕ್ಲೇಶನಾಶನಿಗಂದು 2ಕ್ರಮುಕವರ್ಪಿಸಿ ನೀಲಾಂಜನವೆತ್ತಿ ಧ್ಯಾನಿಸಿಸುಮವಿತ್ತು ಬಲವಂದು ಚಕ್ರವಿಕ್ರಮಗೆ 3ಪೊಡಮಟ್ಟಘ್ರ್ಯವ ಬಿಟ್ಟು ಒಡನೆ ಯಜ್ಞಾಂತದಿಬಿಡೆ ಬ್ರಹ್ಮಾರ್ಪಣ UÉೂೀವಿಂದನ ಪಾದದ್ವಂದ್ವಕೆ 4ಪ್ರಾಣೇಶದಾಸರು ಪ್ರಾಣೇಶದಾಸರು

ಅಂಜಾನೆತನಯಧ |
ನಂಜಾಯನಗ್ರಜ |
ಕಂಜಾಕ್ಷ ಶ್ರೀ ಮಧ್ವ |
ಸಂಜಯವಂತಾ 1ಮಾರುತಿ ನಿನ್ನಯ |
ಕೀರುತಿ ಜಗದೊಳು |
ಬೀರುತಿದ ಕೊ ನಾ |
ಸಾರುತೀ ನೀಗಾ 2ರಾವಣಾನುಜ ಸು |
ಗ್ರೀವಾ ವಿಪ್ರಜಾನಂತೆ |
ಭೂವರನಂತೆ ಕಾಯೋ |
ದೇವೇಂದ್ರ ಪಾಲಾ3ಪ್ರಸ್ತುತಬಿನ್ನಪ|
ವಿಸ್ತರಿಪಕೃತಿಸ |
ಮಸ್ತರೂ ಕೇಳಲಿ |
ಆಸ್ಥೀಯಲಿಂದಾ4ಪ್ರಾಣೇಶ ವಿಠ್ಠಲಾ ಪ್ರೀ |
ತಾನಾಗಬೇಕೀದಕೆ |
ಹೀನ ವಿಷಯಗಳಾ |
ನಾನೊಲ್ಲೆ ದೇವ 5

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|
ಕಂಜನಿರತಭಜಿಸುತಿರಲು |
ಅ.ಪ|
ಎರಡು ಒಂದು ಕೋಟಿರೂಪ|
ಧರಿಸಿ ರಕ್ಕಸರೊಳು ಕಾದಿ |
ಹರಿಯ ಕರುಣ ಗಳಿಸಿದವನ |
ಚರಿತೆಗಳನು ಸ್ಮರಿಸುತಿರಲು 1ತಾಸಿಗೆಂಟು ಒಂದು ನೂರು |
ಶ್ವಾಸಜಪವ ಮಾಡಿ ಜಂತು |
ರಾಶಿಗಳಿಗೆ ಸತತ ಬೇಡಿ |
ದಾಸೆ ಪೂರ್ತಿಸುವವನಿರಲು2ಜಂಗಮರಿಗೆಪಾಣಿಚರಣ|
ಕಂಗಳುಕಿವಿಯಾಡಿಸುತಲಿ |
ಪಿಂಗಳನಿಭಭಾರತೀಶ|
ಹಿಂಗದನವರತ ಪೊರೆಯಲು 3ಪರಿಹರಿಸುತಲಗ್ನಿ ಭಯವ |
ತ್ವರದಿ ಹಿಡಿಂಬ ಕೀಚಕ ಪ್ರಮು |
ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4ಭುಜಕೆ ಗೋಪೀಚಂದನವನು |
ವಿಜಯಚಕ್ರಗಳನು ಧರಿಸಿ |
ಕುಜನರಿಪುಪ್ರಾಣೇಶ ವಿಠಲ |
ಭಜಕನ ದಯ ಪೂರ್ಣವಿರಲು 5ಪ್ರಾಣೇಶದಾಸರು ಪ್ರಾಣೇಶದಾಸರು

ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|
ಕಂಜನಿರತಭಜಿಸುತಿರಲು |
ಅ.ಪ|
ಎರಡು ಒಂದು ಕೋಟಿರೂಪ|
ಧರಿಸಿ ರಕ್ಕಸರೊಳು ಕಾದಿ |
ಹರಿಯ ಕರುಣ ಗಳಿಸಿದವನ |
ಚರಿತೆಗಳನು ಸ್ಮರಿಸುತಿರಲು 1ತಾಸಿಗೆಂಟು ಒಂದು ನೂರು |
ಶ್ವಾಸಜಪವ ಮಾಡಿ ಜಂತು |
ರಾಶಿಗಳಿಗೆ ಸತತ ಬೇಡಿ |
ದಾಸೆ ಪೂರ್ತಿಸುವವನಿರಲು2ಜಂಗಮರಿಗೆಪಾಣಿಚರಣ|
ಕಂಗಳುಕಿವಿಯಾಡಿಸುತಲಿ |
ಪಿಂಗಳನಿಭಭಾರತೀಶ|
ಹಿಂಗದನವರತ ಪೊರೆಯಲು 3ಪರಿಹರಿಸುತಲಗ್ನಿ ಭಯವ |
ತ್ವರದಿ ಹಿಡಿಂಬ ಕೀಚಕ ಪ್ರಮು |
ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4ಭುಜಕೆ ಗೋಪೀಚಂದನವನು |
ವಿಜಯಚಕ್ರಗಳನು ಧರಿಸಿ |
ಕುಜನರಿಪುಪ್ರಾಣೇಶ ವಿಠಲ |
ಭಜಕನ ದಯ ಪೂರ್ಣವಿರಲು 5

ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5