ಈಡನ್ ಬೈಬಲ್ಲಿನ ಹಳೆಯ ಒಡಂಬಡಿಕೆಯ ಪ್ರಕಾರ ಯೂಫ್ರಟಿಸ್ ಕಣಿವೆಯಲ್ಲಿನ ಒಂದು ಸ್ಥಳದ ಹೆಸರು. ದೈವನಿರ್ಮಿತವಾದ ಇಲ್ಲಿನ ತೋಟದಲ್ಲಿ ಆದಂ ಮತ್ತು ಈವ್ ವಾಸಿಸಿದರು. ದೇವರ ಆಣತಿಯನ್ನು ಉಲ್ಲಂಘಿಸಿ e್ಞÁನವೃಕ್ಷದ ನಿಷಿದ್ಧ ಹಣ್ಣನ್ನು ತಿನ್ನಲಾಗಿ ಅವರನ್ನು ತೋಟದಿಂದ ಹೊರಹಾಕಲಾಯಿತು. ಈಡನ್ ಎಂದರೆ ಹೀಬ್ರೂ ಭಾಷೆಯಲ್ಲಿ ಸಂತೋಷ ಎಂದರ್ಥವಿದೆ. ಈಡನ್ನಿನಿಂದ ನದಿಯೊಂದು ದೇವರ ತೋಟಕ್ಕೆ ನೀರು ಒದಗಿಸಲು ಹರಿದುಹೋಯಿತೆಂದು ಜೆನಿಸಿಸ್‍ನಲ್ಲಿ ವರ್ಣಿಸಲಾಗಿದೆ. ಈ ನದಿಗೆ ನಾಲ್ಕು ಉಪನದಿಗಳು ಹುಟ್ಟಿಕೊಂಡವೆಂದೂ ಯೂಫ್ರಟಿಸ್ ಮತ್ತು ಟೈಗ್ರಿಸ್ ಅವುಗಳಲ್ಲಿ ಎರಡೆಂದೂ ಪೀಸಸ್, ಗಿಹೊನ್ ಎಂಬ ಉಳಿದೆರಡು ನದಿಗಳು ಇಂದಿನ ಆರಾಖ್ತೂ ಮತ್ತು ಜಕ್ಬಾಗಳೆಂದೂ ಹೇಳಲಾಗಿದೆ. ಬೈಬಲ್ಲಿನ ಅನಂತರ ಬಂದ ಸಾಹಿತ್ಯಗಳಲ್ಲಿ ಈಡನ್ನಿನ ತೋಟವನ್ನು ಸ್ವರ್ಗವೆನ್ನಲಾಯಿತು. ಅಲ್ಲಿ ಸತ್ಯಧರ್ಮದಿಂದಿರುವವರ ಸಂತಾನ ಚಿರಂಜೀವಿಗಳಾಗಿ ವಾಸಿಸುತ್ತಾರೆಂಬ ಕಲ್ಪನೆಯೂ ಬೆಳೆಯಿತು.

ಯೆಹೂದಿಗಳ ಈ ಭಾವನೆ ಮುಂದುವರಿದು ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಲ್ಲಿನ ಸ್ವರ್ಗಕಲ್ಪನೆಯಲ್ಲಿ ಲೀನವಾಯಿತು.