ಅಂಗಕ್ಕೆ ಸಂಬಂದ್ಥಿಸಿ, ಇಷ್ಟಲಿಂಗದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು ಪ್ರಾಣಕ್ಕೆ ಪ್ರಾಣಲಿಂಗದ ಸಮ್ಯಕ್‍ಜ್ಞಾನಾಚಾರವ ಸಂಬಂದ್ಥಿಸಿ
ಅಂಗಲಿಂಗವೆಂಬ ಬ್ಥಿನ್ನಭಾವವಳಿದು ಒಳಹೊರಗೆಲ್ಲ ಅಖಂಡಜ್ಞಾನ ಸತ್‍ಕ್ರಿಯಾಚಾರಮಯವಾದ ಶರಣಂಗೆ ವಾರ ತಿಥಿ ಲಗ್ನ ವಿಘ್ನಂಗಳಿಲ್ಲ
ಶುಭಾಶುಭಂಗಳಿಲ್ಲ
ಸ್ತುತಿನಿಂದೆಗಳಿಲ್ಲ
ಪೂಜ್ಯಾಪೂಜ್ಯಂಗಳಿಲ್ಲವಾಗಿ
ಅಖಂಡೇಶ್ವರಾ
ನಿಮ್ಮ ಶರಣ ಎಂತಿರ್ದಂತೆ ಸಹಜಬ್ರಹ್ಮವೆ ಆಗಿರ್ಪನು.