ಅಂಗಡಿಯ ಬೀದಿಯಲ್ಲಿ ಕೊಂಗಿತಿ



Pages   (key to Page Status)   


ಅಂಗಡಿಯ ಬೀದಿಯಲ್ಲಿ ಕೊಂಗಿತಿ ಕುಳಿತು ಭಂಗವ ಮಾರುತಿಪ್ಪಳು ನೋಡಾ. ಆಕೆಗೆ ಹರಿಗೆಯ ಪಂಗನೆಂಬವ ಗಂಡನಾಗಿಪ್ಪನು ನೋಡಾ. ಅಂಗಡಿಯ ಬೀದಿಯ ಮುಚ್ಚಿ
ಕೊಂಗಿತಿಯ ಕೋಡ ಮುರಿದು
ಹರಿಗೆಯ ಪಂಗನ ಕೊಂದಲ್ಲದೆ
ಲಿಂಗವ ಕಾಣಬಾರದು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.