ಅಂಗದ ಕೊನೆಯಲ್ಲಿ ಅಲೆದಾಡುವ



Pages   (key to Page Status)   


ಅಂಗದ ಕೊನೆಯಲ್ಲಿ ಅಲೆದಾಡುವ ಕಪಿಯ ಕಂಗಳ ಕೊನೆಯ ಬಿಡುಮುಳ್ಳು ತಾಕಲು
ಭಂಗಿತರಾದರು ಹರಿ ಬ್ರಹ್ಮರೆಲ್ಲರು. ಅಂಗದ ಕೊನೆಯ ಮೊನೆಯ ಬಿಡುಮುಳ್ಳ ಮುರಿಯಲು
ಮಂಗಳಮಯ ಮಹಾಲಿಂಗವಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.