ಅಂಗದ ಗುಣವಳಿಯದೆ ಪ್ರಾಣದ ಪ್ರಪಂಚು ಹಿಂಗದೆ ಭಾವದ ಭ್ರಮೆಯುಡುಗದೆ ಮನದ ಮಾಯವಡಗದೆ ಆತ್ಮನ ಅಹಂಮಮತೆ ಕೆಡದೆ ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.