ಅಂಗದ ಮೇಲೆ ಲಿಂಗ ಲಿಂಗದ ಮೇಲೆ ಅಂಗವಿದೇನೊ ? ಮನದ ಮೇಲೆ ಅರಿವು ಅರಿವಿನ ಮೇಲೆ ಕುರುಹು ಇದೇನೊ ? ನೀನೆಂಬಲ್ಲಿ ನಾನು ನಾನೆಂಬಲ್ಲಿ ನೀನು. `ನೀ' `ನಾ' ಎಂಬುದೆ?_ತೆರಹಿಲ್ಲ ಗುಹೇಶ್ವರಾ.