ಅಂಗಲಿಂಗಸಂಗವು ಲಿಂಗದಲ್ಲಿ ಆಯತವಯ್ಯಾ. ನಿಮಿಷ ಕರಸ್ಥಲವನಗಲಿದಡೆ ಭಂಗವಯ್ಯಾ. ಕಂಗಳೆ ಕರುವಾಗಿ ಲಿಂಗವೆ ಗೂಡಾಗಿ ಲಿಂಗನಿಷ್ಪತ್ತಿಯಲಿಪ್ಪ ಕೂಡಲಚೆನ್ನಸಂಗಾ ನಿಮ್ಮ ಶರಣ.