ಅಂಗವಿಡಿದು ಅಂಗ ಅನಂಗವೆಂಬೆರಡನೂ ಹೊದ್ದದ ಮಹಿಮನ ನೋಡಾ ! ಅಂಗವೆ ಆಚಾರವಾಗಿರಬಲ್ಲ ಆಚಾರವೆ ಅಂಗವಾಗಿರಬಲ್ಲನಾಗಿ ಅಂಗವಿಲ್ಲದಪ್ರತಿಮ ನೋಡಾ ! ಆಚಾರವೆ ಸ್ವಾಯತ ಆಚಾರವೆ ಪ್ರಾಣ ! ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರಭಿಕ್ಷವನಿಕ್ಕಾ ಚನ್ನಬಸವಣ್ಣಾ.