ಅಂಗಸಂಬಂಧ ಲಿಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು. ಲಿಂಗಸಂಬಂಧ ಅಂಗವಾದ ಬಳಿಕ ಲಿಂಗೋಪಜೀವಿಯಾಗಿರಬೇಕು
ಇದಾವ ಸಂಬಂಧವಿಲ್ಲದೆ ಆಶ್ರಯ ಗುಣದಿಂದ ಲಾಂಛನವಾದುದೇನಯ್ಯಾ ? ಲಾಂಛನಂ ದುರ್ಲಭಂ ಚೈವ ಸ್ವಾನುಭಾವೋಹ್ಯತಃ ಪರಂ ದುರ್ಲಭಂ ಶಿವತತ್ವಂ ಚ ಪ್ರಾಣಲಿಂಗಮತಃ ಪರಂ ಎಂದುದಾಗಿ
ಆಶ್ರಯದ ಪರಿಯಲ್ಲ; ನಿರಾಶ್ರಯದ ಪರಿಯಲ್ಲ
ಲಿಂಗಸಾರಾಯ ಶರಣ. ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ