ಅಂಗ ಲಿಂಗದಲ್ಲಿ ತರಹರವಾಗಿ ಸಮತೆ ಶಾಂತಿಯಲ್ಲಿ ತರಹರವಾಗಿ ಮನ ಜ್ಞಾನದಲ್ಲಿ ತರಹರವಾಗಿ ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.