ಅಂಗ ಲಿಂಗವೆಂದರೆ ಪ್ರಳಯಕ್ಕೆ ಒಳಗು ಮನ ಲಿಂಗವೆಂದರೆ ಬಂಧನಕ್ಕೊಳಗು ಪ್ರಾಣ ಲಿಂಗವೆಂದರೆ ಸಂಸಾರಕ್ಕೊಳಗು. ಇದಾವಂಗವೆನಲಿಲ್ಲ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು