ಅಂಡಜವಳಯವಿಲ್ಲದ ಮುನ್ನ ದ್ವೀಪಂಗಳೇಳೂ ಇಲ್ಲದ ಮುನ್ನ ರವಿಚಂದ್ರರಿಲ್ಲದ ಮುನ್ನ ತ್ರಿದೇವತೆಗಳಿಲ್ಲದ ಮುನ್ನ ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !