ಅಂತರಂಗ ಸನ್ನಹಿತ ಬಹಿರಂಗ ನಿಶ್ಚಿಂತವೊ ಅಯ್ಯಾ. ತನು ತನ್ನ ಸುಖ ಮನ ಪರಮ ಸುಖವೊ ಅದು ಕಾರಣ ಕಾಯ ವಾಯವೊ ಗುಹೇಶ್ವರ ನಿರಾಳವೊ ಅಯ್ಯಾ.