ಅಂಥ ಅಂಗುಷ್ಠಮಾತ್ರಭುವನಯೆಂಬ ಬ್ರಹ್ಮಾಂಡವ



Pages   (key to Page Status)   


ಅಂಥ ಬ್ರಹ್ಮಾಂಡವ ಮೂವತ್ತೆಂಟುಸಾವಿರದ ಮುನ್ನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಂಗುಷ್ಠಮಾತ್ರಭುವನಯೆಂಬ ಭುವನ. ಆ ಭುವನದೊಳು ಅಖಂಡಿತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾತೊಂಬತ್ತುಕೋಟಿ ದೇವರ್ಕಳು
ಇಂದ್ರಚಂದ್ರಾದಿತ್ಯರು
ವೇದಪುರುಷರು
ಮುನೀಂದ್ರರು
ನೂರಾತೊಂಬತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.