ಅಂದಂದಿಂಗೆ ಬಂದ ಪದಾರ್ಥವನೆಂದೆಂದೂ ತಾನುಂಬ ಕೈಯಲಿ ಕೊಡುವುದು ಎಂತೊ? ಲಿಂಗಕ್ಕೆ ನೀಡುವರೆಂತೊ? ಲಿಂಗಕ್ಕೆ ಕೊಡುವರೆಂತೊ? ಲಿಂಗಕ್ಕೆ ಸಲುವುದೆಂತೊ? ಶಿವಶಿವಾ! ಮಂಚವೊಂದೆ ಕಂಚು ಬೇರೆಂಬ ಪ್ರಪಂಚಿಯನೊಲ್ಲ ಕೂಡಲಚೆನ್ನಸಂಗಮದೇವಾ.