ಅಡವಿಯಲೊಂದು ಮನೆಯ ಮಾಡಿ ಆಶ್ರಯವಿಲ್ಲದಂತಾಯಿತ್ತು. ನಡುನೀರಿನ ಜ್ಯೋತಿಯ ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು. ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ !