ಅಡಿಗಡಿಗೆ ಭವಹರನ ನೆನೆವುತ್ತ ಭಸಿತವ ಧರಿಸುತ್ತ ಭವವ ತಪ್ಪಿಸಿಕೊಂಬ ಸುಖಕ್ಕೆ ಇನ್ನು ಸರಿಯುಂಟೇ? ಪ್ರತಿಯಿಲ್ಲದ ಅಪ್ರತಿಮ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.