ಅತಿರಥ ಸಮರಥರೆನಿಪ ಹಿರಿಯರು ಮತಿಗೆಟ್ಟು ಮರುಳಾದರಲ್ಲಾ ! ದೇವಸತ್ತ ಬ್ರಹ್ಮ ಹೊತ್ತ ವಿಷ್ಣು ಕಿಚ್ಚ ಹಿಡಿದ. ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು. ಇದ ಕಂಡು ಬೆರಗಾದೆ ಗುಹೇಶ್ವರಾ.