ಅನಾದಿಯಾಗಿ ಪಶು ಪಾಶ ಮಲ ಮಯಾಕರ್ಮಗಳುಂಟಾದರೆ, ಈ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅನಾದಿ[ಯಾ]ಗಿ ಪಶು ಪಾಶ ಮಲ ಮಯಾಕರ್ಮಗಳುಂಟಾದರೆ
ಈ ಜಗವನೊಬ್ಬರೂ ಸೃಷ್ಟಿಮಾಡಿದ ಕರ್ತುವಲ್ಲ. ಎಂದೆಂದೂ ಜಗವಿದ್ದಿತ್ತು ನಿತ್ಯವೆನ್ನು. ಎಂದೆಂದೂ ಜಗವಿದ್ದಿತ್ತೆಂಬೆಯಾದರೆ
ಶಿವನ ಸೃಷ್ಟಿ
ಸ್ಥಿತಿ
ಸಂಹಾರ
ಸ್ಥಿರೋಭಾವ
ಅನುಗ್ರಹವೆಂಬ ಪಂಚಕೃತ್ಯಗಳು ಹುಸಿಯೆಂದೆನ್ನು. ಶಿವನಿಗೆ ಸೃಷ್ಟಿ ಸ್ಥಿತಿ ಸಂಹಾರಾರ್ಥವುಂಟಾದರೆ
ಈ ಜಗತ್ತೆಲ್ಲವೂ ಶಿವನ ನೆನಹು ಮಾತ್ರದಿಂದ ಹುಟ್ಟಿತ್ತಲ್ಲದೆ
ಎಂದೆಂದೂ ಉಂಟೆಂಬುದು ಶೈವ ಪಶುಮತವಲ್ಲದೆ
ವೀರಶೈವರ ಮತವಲ್ಲ. ವೀರಶೈವರ ಮತವೆಂತೆಂದಡೆ: ಘನ ಗಂಬ್ಥೀರ ವಾರಿದ್ಥಿಯೊಳಗೆ ಫೇನತರಂಗ ಬುದ್ಬುದ ಶೀಕರಾದಿಗಳು ತೋರಿದಡೆ
ಆ ಸಾಗರ ಹೊರಗಾಗಿ ತೋರಬಲ್ಲವೇ? ಆ ಪರಶಿವಸಾಗರದಲ್ಲಿ ತೃಣಾದಿ ಬ್ರಹ್ಮಾಂತವಾದ ದೇಹಿಗಳು ಉತ್ಪತ್ತಿಯಾಗಿ ಮತ್ತಲ್ಲಿಯೇ ಅಡಗುತ್ತಿಪ್ಪರು ನೋಡಾ. ಇದು ಕಾರಣ
ಲಿಂಗನಿರ್ಮಿತದಿಂದ ಜಗತ್ತಾಯಿತೆಂದೆ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.