ಅನಾದಿಯ ಮಗನು ಆದಿ ಆದಿಯ ಮಗನತೀತ ಅತೀತನ ಮಗನು ಆಕಾಶ. ಆಕಾಶನ ಮಗನು ವಾಯು ವಾಯುವಿನ ಮಗನಗ್ನಿ ಅಗ್ನಿಯ ಮಗನು ಅಪ್ಪು ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ