ಅನುಶ್ರುತವ ಮಾಡೆಹೆನೆಂದು ಉಪ್ಪರಗುಡಿಯನೆತ್ತಿ ಮಾಡುವ ಭಕ್ತನ ಮನೆ ಅಟ್ಟಿಕ್ಕುವ ಲಂದಣಗಿತ್ತಿಯ ಮನೆ. ಸರ್ವಜೀವರೊಳಗೆ ಚೈತನ್ಯಾತ್ಮಕ ಶಿವನೆಂದು ಮಾಡುವುದು ಭೂತದಯಕಿಕ್ಕುವುದು ಸಯದಾನದ ಕೇಡು. ಸೂಳೆಯ ಮಗನಾಗಿ ಮಹವನಿಕ್ಕುವಡೆ ತಾಯ ಹೆಸರಾಯಿತ್ತು ತಂದೆಯ ಹೆಸರಿಲ್ಲ_ಕೂಡಲಚೆನ್ನಸಂಗಮದೇವಾ.