ಅದೇ ಮನೆ, ಅದೇ ಕಿಟಕಿ, ಅದೇ ಹುಡುಗಿ. ಅವಳು ನೋಡುತ್ತಿದ್ದ
ರೀತಿಯೊ ! ಇಲ್ಲ, ಆಕೆ ಕಸಬಿನವಳಲ್ಲ. ನೋಡಿದರೇ ಗೊತ್ತಾಗುತ್ತಿತ್ತು ___
ಅದು ಸಂಭಾವಿತರ ಸದ್ಗ್ರುಹಸ್ಥರ ಮನೆಯೆಂದು. ಆ ವಿಶಾಲವಾದ ಹೂ __
ದೋಟ, ತಾರಸಿಯ ಎರಡು ಮಹಡಿಯ ಭವ್ಯ ಮನೆ, ಎತ್ತರದ ವಿಲಾಯತಿ
ನಾಯಿ.... ಘನವಾದ ಬ್ಯೂಕ್ ಕಾರು....ರೇಡಿಯೋ ಸಂಗೀತ. ಆ ಹುಡು
ಗಿಯೂ ಹಾಡುತ್ತಿದ್ದಳು ಒಮ್ಮೊಮ್ಮೆ; " ಓ ಆಜಾ ಮೋರೇ ರಾಜಾ.... "
ಸದಾನಂದ ಬಹಳ ಹೋತ್ತು ಯೋಚಿಸಿದ, ತನಗೋಸ್ಕರವೇ ಇರ
ಬಹುದೇ ಆಕೆ ಹಾಡಿದ್ದು ? ತಾನೇ ಏನು ಅವಳ "ರಾಜಾ? ಎಂಥ
ಹುಚ್ಚು ! ಮಾಸಿದ ಷರಾಯಿ_ಷರಟು , ಎಣ್ಣೆ ಕಾಣದ ತಲೆಗೂದಲು,
ಸಾಬೂನು ಸಮಿಪಸದ ಶರೀರ....
ಅವನು ಕಾಲೇಜಿನಲ್ಲಿದ್ದಾಗ ಯಾರೋ ಒಮ್ಮೆ ಹೇಳಿದ್ದರು " ವಿಚಿತ್ರ
ಕಣ್ಣುಗಳಿವೆಯಪ್ಪ ನಿನಗ__ಎಂಥ ಸೌಂದರ್ಯ ! " ಎಂತ. ಇರಬಹುದೆ ?
ಈ ಹುಡುಗಿ ಈ ಕಣ್ಣುಗಳಿಗೆ ಮಾರುಹೋಗಿರಬಹುದೆ ?
ಆ ಸಂಜೆ ಆಳು ಬಂದು ಅವನನ್ನು ಕರೆದ. ....ಸುಂದರವಾಗಿ ಅಲಂ
ಕ್ರುತವಾದ್ದ ಪಡಸಾಲೆಯಲ್ಲಿ ಅವನು ಬಂದು ನಿಂತುದಾಯಿತು.
ವಯಸ್ಸಾದ ಹೆಂಗಸೊಬ್ಬಳು ಬಂದು ಒರಟು ಧ್ವನಿಯಲ್ಲಿ ಕೇಳಿದಳು:
" ದಿನವೂ ಎದುರು ಜಗಲಿಯಲ್ಲಿ ಯಾಕೆ ಕೂತಿರ್ತೀಯಾ ? "
" ಈಚೆಗೆ ವಾಕಿಂಗ್ ಬಂದವನು ಮುಂದೆ ನಡೆಯಲಾಗದೆ ಅಲ್ಲಿ
ವಿಶ್ರಾಂತಿ ಪಡೀತೇನೆ. "
" ನಿನಗೇನಾದರೂ ಕೆಲಸ ಬೇಕೆ ? "
" ಈ ಒಂದು ವರ್ಷದಿಂದ ಅದನ್ನೇ ಹುಡುಕುತ್ತಿದ್ದೇನೆ. "
" ಕಸಗೂಡಿಸುವುದರಿಂದ ಹಿಡಿದು.... "
" ಅಡಿಗೆ ಮಾಡಬಲ್ಲೆಯಾ ? "
ಸದಾನಂದನ ನಾಲಿಗೆಯಲ್ಲಿ ನೀರೂರಿತು. ತುಟಿಯನ್ನೊದ್ದೆಗೊಳಿ
ಸುತ್ತಾ ಆತ " ಓಹೋ " ಎಂದ.
"ಈಗಿನಿಂದಲೆ ಬಾ. ಮುಂದೆ ಕೆಲಸ ನೋಡಿ ಸಂಬಳ ಗೊತ್ತು
ಮಾಡುತ್ತಾರೆ. "
ತನ್ನನ್ನು ತಾನೇ ನಂಬಲಿಲ್ಲ ಸದಾನಂದ ಕ್ಷಣಕಾಲ.
ಆ ಹೆಂಗಸು ಅವನಿಗೊಂದು ಕೊಠಡಿ ತೋರಿಸಿದಳು.ಪಕ್ಕದಲ್ಲೆ
attached bathroom; ಎರಡು ಕೊಳಯಿಗಳು_ಒಂದರಲ್ಲಿ ಬಿಸಿನೀರು
ಒಂದರಲ್ಲಿ ತಣ್ಣೀರು. ಬದಲಿಗೆಂದು ಬಟ್ಟೆಬರೆಗಳಿದ್ದವು_ಸೇವಿಂಗ್ ಸೆಟ್
ಇತ್ಯಾದಿ. ಅಂತೂ ಈ ಮೊದಲು ಅದೇ ಕೊಠಡಿಯಲ್ಲಿ ಬೇರೆ ಯಾರೋ
ಇದ್ದುದು ಖಂಡಿತ....ಅಲ್ಲೇ ಒಂದು ಮಂಚವಿತ್ತು. ಮಂಚದ ಮೇಲೆ ಸುತ್ತಿ
ಇಟ್ಟಿದ್ದ ಹಾಸಿಗೆ, ಮೂಲೆಯಲ್ಲಿ ಡ್ರೆಸ್ಸಿಂಗ್ ಟೇಬಲ್ಲು....
ಸದಾ, ಗಡ್ಡಕ್ಕೆ ಸೋಪು ಹಚ್ಚಿದ. ಸ್ವಲ್ಪ ಹೊತ್ತಿನಲ್ಲೇ ಮುಖ ನುಣ್ಣ
ಗಾಯಿತು. ನಿಶ್ಚಿಂತೆಯಾಗಿ ಸ್ನಾನ ಮಾಡಿದ. ಬಟ್ಟೆ ಬದಲಿಸಿದ.
ಅಷ್ಟರಲ್ಲಿ ಆ ಹೆಂಗಸು ಬಂದು ಐದೈದು ರೊಪಾಯಿಗಳ ಇಪ್ಪತ್ತು
ಹಸುರು ನೋಟುಗಳನ್ನು ಅವನ ಕೈಲಿಟ್ಟು " ಚಿಲ್ಲರೆ ಖರ್ಚಿಗೆ " ಎಂದಳು.
ಸದಾನಂದ ಮರುಮಾತಾಡಲಿಲ್ಲ.
ಸ್ವಲ್ಪ ಹೊತ್ತು ಸುಮ್ಮನಿದ್ದು " ಅಡಿಗೆ ಮನೆ ತೋರಿಸ್ತೀರಾ ?" ಎಂದು
ಕೇಳಿದ.
ಆಕೆ ಕರೇದೊಯ್ದಳು....ಅಡಿಗೆ ಮನೆ ಸೊಗಸಗಿತ್ತು. ವಿದ್ಯುತ್ ಒಲೆ
ಉದ್ದಕ್ಕೂ ಗುಂಡಿಗಳನ್ನು ಒತ್ತಿದರಾಯಿತು.
" ಎರಡು ಕಪ್ ಕಾಫಿ ಮಾಡಿ ಯಜಮಾನಿಗೆ ಒಯ್ದು ಮುಟ್ಟಿಸು "
ಎಂದಳು ಆ ಹೆಂಗಸು. ಆ ಮಾತಿನಲ್ಲಿ ಅಣಕದ ಧ್ವನಿಯಿದ್ದಂತೆ ತೋರಿತು
ಸದಾನಿಗೆ.
ಎಂದಾದರೊಮ್ಮೆ ಸದಾ ಕಾಫಿ ಮಾಡುವುದಿತ್ತು. ಈಗ ಅದೆಲ್ಲವೂ ಮರೆತು
ಹೋಗಿದೆ. ಏನು ಮಾಡಬಲ್ಲ ?
....ಅಂತು ಆ ಸಾಹಸಿ ಹಿಂಜರಿಯಲಿಲ್ಲ.
****
ಹತ್ತು ನಿಮಿಷಗಳಲ್ಲಿ ಏನೋ ಒಂದು ಕಷಾಯ ಸಿದ್ದವಾಯಿತು. ಟ್ರೀ_
ಯಲ್ಲಿ ಎರಡು ಕಪ್ಪುಗಳನ್ನಿಟ್ಟು ಎತ್ತಿಕೊಂಡು ಯಜಮಾನಿಗೊಂದು,
ಯಜಮಾನನಿಗೊಂದು. " ಏನಾದರೂ ಮಾಡಿ ಈ ಕಲಗಚ್ಚಿಗೆ ಕಾಫಿಯ
ರುಚಿಯನ್ನು ಕೊಡಿಸು ದೇವಾ " ಎಂದಪ ಹಲವಾರು ತಿಂಗಳ ಮೇಲೆ ಮೊದಲ
ಬಾರಿಗೆ ಆತ ದೇವರನ್ನು ಪ್ರಾರ್ಥಿಸಿದ.
ಆ ಹೆಂಗಸು ಅವನನ್ನೊಯ್ದು ಯಜಮಾನಿಯ ಬಳಿ ಬಿಟ್ಟಳು.
ಹದಿನೆಂಟು ಹತ್ತೊಂಭತ್ತರ ಯುವತಿ_ಯೌವನ ಮುಗುಳ್ನಗುತ್ತಿದೆ.
ಸೋಫಾಕ್ಕೊರಗಿ ಅರೆತೆರೆದ ಕಣ್ನುಗಳಿಂದ ಸದಾ ಬರುತ್ತಿರುವುದನ್ನೇ ಅವಳು
ಇದಿರು ನೋಡುತ್ತಿದ್ದಾಳೆ. ರುಚಿಕಟ್ಟಾಗಿ ತೊಟ್ಟಿದ್ದ ಪೋಷಾಕು ಅವಳ
ಸೌಂದರ್ಯವನ್ನು ಇಮ್ಮಡಿಸಿವೆ. ಕಾತರದಿಂದ ಏರಿಳಿಯುತ್ತಿದೆ ವಕ್ಷಸ್ಥಳ.
ಸದಾ ಮೂಕನಂತೆ ಮುಂದೆ ಬಂದು, ಟೀಪಾಯಿಯ ಮೇಲೆ ಟ್ರೇಯ
ನ್ನಿರಿಸಿದ.
ಕಂಪಿಸುವ ಧ್ವನಿಯಲ್ಲಿ ಅವಳು ಕೂಗಿದಳು.
" ಸದಾ! "
ದಿಗ್ಭ್ರಾಂತನಾಗಿ ಆತ ನಿಂತಲ್ಲೇ ನಿಂತ. ಯವುದೋ ನೆನಪು
ಧಾವಿಸಿ ಬಂತು. ಅವನಿಗರಿಯದೆಯೇ ಉತ್ತರ ಹೊರಟಿತ್ತು !
"ರಮಾ !"
ಸದಾ ಮತ್ತು ರಮಾ__ಮೂರು ವರ್ಷಗಳ ಕೆಳಗೆ ಅವರು ಸಹಪಾಠಿ
ಗಳಾಗಿದ್ದರು. ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದರು ಆಗ. ಆಗರ್ಭ
ಶ್ರೀಮಂತರ ಮಗಳನ್ನು ದರಿದ್ರ ಸದಾ ಪ್ರೀತಿಸುವುದು ಸುಲಭದ ಕೆಲಸವಾಗಿ
ಆದರೆ ಸಂಪ್ರದಾಯಸ್ಥರ ಮನೆಯಲ್ಲಿ ಬೆಳೆದ ಹುಡುಗ ಅದಕ್ಕೆ ಸಿದ್ದವಾಗಿರ
ಲಿಲ್ಲ. ರಮಾನ ಹಿಂದೂ ಮುಂದೂ ಓಡಾಡುತ್ತಿದ್ದವರಿಗೆ ಕಡಿಮೆ ಇರಲಿಲ್ಲ
ಪ್ರಕರಣಗಳಾದುವು.ರಮಾ ಬೇಸತ್ತು ಅಧ್ಯಯನವನ್ನೇ ಬಿಟ್ಟುಕೊಟ್ಟಳು....
ಇಂದು ಅದೇ ರಮಾ ಕೈಚಾಚಿ ಕರೆಯುತ್ತಿದ್ದಾಳೆ!
"....ಇಷ್ಟು ದಿನ ಕಾದಿದ್ದೆ."
"ಎಷ್ಟೊಂದು ಬದಲಾಗಿದ್ದೀಯೇ....ನೀನು ಯಾರೆಂದು ಮೊದಲು
ಗೊತ್ತಾಗಲೇ ಇಲ್ಲ....ಕಾಫಿ ?"
"ಚೆನ್ನಾಗಿ ಮಾಡಿದ್ದೀಯಾ?"
"ಕಾಫಿಯೋ-ಕಷಾಯವೋ ಕುಡಿದು ನೋಡು ಬೇಕಾದರೆ?"
"ನೀನು ಮೊದಲು...."
ಒಂದು ಕಪ್ಪನ್ನೆತ್ತಿ ಹುಬ್ಬುಗಂಟಿಕ್ಕುತ್ತಾ ಸ್ವಲ್ಪ ಹೀರಿದ ಸದಾ. ಬಲ
ಕಷ್ಟದಿಂದ ನುಂಗಬೇಕಾಯಿತು. ರಮಾ ಅವನ ಕೈಯಿಂದಳಲೇ ಕಪ್ಪನು
ಕಸಿದುಕೊಂಡು ತಾನೂ ಅದರಿಂದಳಲೇ ಕುಡಿದಳು. ಬಾಯಾರಿದವನ
ಕೊಳಾಯಿ ನೀರಿಗೆ ಬಾಯೊಡ್ಡಿದ ಹಾಗೆ...
ತನ್ನ ಕತೆ ಹೇಳಿದಳು ರಮಾ. ಅಣ್ಣ ಅಮೆರಿಕಕ್ಕೆ ಹೋಗಿದ್ದಾನೆ
ತಾಯಿಯಂತೂ ಬಾಲ್ಯದಿಂದಲೇ ಇಲ್ಲವಲ್ಲ. ತಂದೆಯೋ ಬೆಂಗಳೂರು---
ಮದ್ರಾಸು ಪ್ರವಾಸಗಳಲ್ಲೇ ನಿರತರು. ಎಲ್ಲದಕ್ಕೂ ತನ್ನದೇ ಒಡೆತನ.
"ಸದ್ದೂ, ನೀನೇನು ಮಾಡಿದೆ ಇಷ್ಟು ದಿನ?"
"ಕೆಲನಸವಿಲ್ದೆ ಅಲೀತಿದ್ದೆ..."
"ಅಯ್ಯೋ ಪದವೀಧರಾ....ನಿನ್ನಂಥವನೂ ಕೆಲಸ ಮಾಡ್ಭೇಕೆ?"
"ಅಲ್ಲದ್ ಮತ್ತೆ? ನಮ್ಮಪ್ಪ ಸಂಪಾದಿಸಿ ಇಟ್ಟಿದಾನೇನು?"
"ಷ್" ಎಂದಳು ರಮಾ. 'ಅಂಥ ಮಾತಾಡಾಬಾರದು. ನನ್ನ ಈ
ಐಶ್ವರ್ಯವೆಲ್ಲ ನಿನ್ನದೇ....!"
"ಯಾಕೋ ಇದೆಲ್ಲಾ ಸಿನೇಮಾದಲ್ಲಿ ನಡೆದ್ ಹಾಗ್ದೆ...."
" ಛೆ ! ಇಲ್ಲ ! ದೈವ ಬರೆದ ಬರಹ. ತಪ್ಪಿಸೋಕಾಗತ್ಯೆ?"
"ಅಲ್ಲವೆ ! "
****
ಸದಾನ ಅದೃಷ್ಟ ಖುಲಾಯಿಸಿತು. ಅವನು ಅಡಿಗೆ ಭಟ್ಟನಾಗಲಿಲ್ಲ. ರಮಾಳ ತಂದೆ ಬಂದೊಡನೆ ಆತ ಅವರಿಗೆ
ಗುಪ್ತಕಾರ್ಯದರ್ಶಿಯಾದ.
ಕೈಯಲ್ಲಿ ದುಡ್ಡು ಓಡಾಡಿತು.ಸ್ವಂತದ ಕಾರು....ತನ್ನ ಬಡಮನೆಯವರಿಗೆ
ಸದಾ ನೆರವಾದ.
ಒಂದು ದಿನ ರಮಾ ತೋಳಬಂಧನದಿಂದ ಅವನನ್ನು ಬಿಡುಗಡೆ ಮಾಡ
ಲಿಲ್ಲ. ತಾನು ಮಾಡುವುದು ಸರಿಯೆ? ಎಂದು ಸದಾ ಚಿಂತಿಸಿದ.
"ರಮಾ! ಇದು ತಪ್ಪು. ನಾವು ಹೀಗೆ ಮಾಡಬಾರದು....ತಮ್ಮದು
ಪವಿತ್ರ ಪ್ರೇಮವಾಗಿರಬೇಕು. ಆದರ್ಶ ಪ್ರೇಮವಾಗಿರಬೇಕು." ಎಂದು
ಭಾಷಣ ಮಾಡಿದ.
"ಮುಂದಿಟ್ಟ ನೈವೇದ್ಯವನ್ನು ಸ್ವೀಕರಿಸದ ನೀನೆಂಥ ಸನ್ಯಾಸಿ !"
ಎಂದಳು ರಮಾ.
ಸನ್ಯಾಸಿ ಎನಿಸಿಕೊಂಡಾಗ ಸದಾನಿಗೆ ಅಪಮಾನವಾಯಿತು. ಅವನು
ಪೂಜಾರಿಣಿ ತಂದ ನೈವೇದ್ಯವನ್ನು ಸ್ವೀಕರಿಸಿದ.
****
ಮದುವೆ ಗೊತ್ತಾಗಿದೆ. ಅಗೋ ಸಂಭ್ರಮ....ಶ್ರೀಮಂತರ ಮನೆಯ
ಮಗಳ ಮದುವೆ. ಸಹಸ್ರ ಸಹಸ್ರವಾಗಿ ನಗರದ ಪ್ರತಿಷ್ಠಿತ ವ್ಯಕ್ತಿಗಳು
ಬರುತ್ತಿದ್ದಾರೆ. ಕಾರುಗಳಲ್ಲಿ__ಕುದುರೆಗಳ ಮೇಲೆ__ನಡೆದುಕೊಮಡು__
ಬಡವರಾಗಿ ಈ ಲೋಕದಲ್ಲಿ ಯಾರೂ ಹುಟ್ಚಬಾರದು. ಹಿಂದಿನ ಜನ್ಮದಲ್ಲಿ
ಪಾಪಿಗಳಾದವರೇ ಈಗ ಬಡವರಾಗುತ್ತಾರೆ. ಐಶ್ವರ್ಯವೇ ಸಂಸ್ಕ್ರುತಿಯ
ಭಂಡಾರದ. ಬೀಗದ ಕೈ. ಶ್ರೀಮಂತ. ವರ್ಗದಿಂದಲೇ ಸಂಸ್ಕ್ರುತಿಯ
ಲೋಕ ಸುಂದರವಾಗಿದೆ-ವಾಸ ಯೋಗ್ಯವಾಗಿದೆ. ಅಂಥವರ ಹುಡುಗಿ
ಯನ್ನು ಕೈ ಹಿಡಿಯವುದೊಂದು ಕಳೆದ ಜನ್ಮದ ಸುಕೃತದ ಫಲ!
ಅದೋ,ಮಂಗಳವಾದ್ಯ ವೊಳಾಗುತ್ತಿದೆ......ಒಂದೆಡೆ ಮೂಲೆಯಲ್ಲಿ
ಪುರೋಹಿತರು ಮಂತ್ರ ಪಠಿಸುತ್ತಿದ್ದಾರೆ...ರಮಾ..ರಮಾನನ್ನು ಸಿಂಗಸು
ತ್ತಿದ್ದಾರೆ.
ಸದಾ....ಸದಾ ಈ ಷರಾಯಿ ಸೊಂಟದಲ್ಲಿ ಸಡಿಲಾಗುತ್ತಿದೆಯಲ್ಲವೆ
ಬತ್ತಿದ ಬಡ ಹೊಟ್ಟಿ.
" ಏಯ್! ಏಯ್!"
ಉತ್ತರವಿಲ್ಲ.
" ಏಯ್! ಏಯ್!"
ಆ ಪೋಲೀಸಿನವನು ಕೈಬೆತ್ತದಿಂದ ಮೆಲ್ಲನೆ ಹೊಡೆದ....
ಸದಾನಿಗೆ ಎಚ್ಚರವಾಯಿತು.
" ಫುಟಪಾಥ್ ಮಲಗೋದಕ್ಕಲ್ಲ....ಏಳು !"
"..................."
"ಏಳು! ಚಿತ್ತೂರಿನಿಂದ ಬಂದು ಇಲ್ಲಿ ಸಾಯ್ತಿವೆ."
"ಅಲ್ಲ! ನಾನು ಕನ್ನಡದವನೇ, ಇಲ್ಲಿಯವನೇ. ವಿಶ್ವವಿದ್ಯಾಲಯ
ಪದವೀಧರ...."
"ನಡಿಯಾಚೆ__ಪದವೀಧರನಂತೆ__ಹುಚ್ಚ!"
ಯಾರೋ ಕೊರಕಲು ಧ್ವನಿಯಲ್ಲಿ ಹಾಡುತ್ತಿದ್ದರು.
"ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ...."
ಇಲ್ಲ. ಇಲ್ಲ ಧರ್ಮಶಾಲೆ ಇಲ್ಲ__ಇಲ್ಲಿರುವುದು ಫುಟ್ ಪಾತ್ ಮತ್ತು
ಅದರ ರಕ್ಷಕರು !