ಅಮಲರಪ್ಪವರಾರೆಂದಡೆ; ಅನಾದಿಮಲ ಸಂಸಾರವೆಂದರಿದು


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಮಲರಪ್ಪವರಾರೆಂದಡೆ; ಅನಾದಿಮಲ ಸಂಸಾರವೆಂದರಿದು ನಿರ್ಮೋಹಿಗಳಾದವರು. ಅಕಾಯಚರಿತ್ರರಾರೆಂದಡೆ; ಸದ್ಗುರುಪಥದಲ್ಲಿ ನಿಂದು
ಆನೆಂಬ ತನುಗುಣವಳಿದವರು. ಆದಿ-ಅನಾದಿಗಳೆಂಬೆರಡಳಿದವರಾರೆಂದಡೆ ಶಾಂತಿಸ್ಥಲದಲ್ಲಿ ನಿಂದು ಪರಮಸುಖಿಗಳಾಗಿಪ್ಪವರು. ದ್ವೈತಾದ್ವೈತವನತಿಗಳೆದವರಾರೆಂದಡೆ
ತೋರುವ ತೋರಿಕೆ ನಿರ್ಮಲಸ್ವರೂಪರಾದವರು. ಅವರು ತಾವೆ ನಿಮಗರ್ಪಿತ
ನಿಮ್ಮಾಣೆ
ಕೂಡಲಚೆನ್ನಸಂಗಮದೇವಾ