ಅಮಳೋಕ್ಯದಲ್ಲಿ ಲಿಂಗವ ಧರಿಸುವರೆ ಅನ್ನ ಪಾನಾದಿಗಳ ಹಂಗಳಿಯಬೇಕು ಅಹಂಕಾರ ಮದಂಗಳಳಿಯಬೇಕು ಜ್ಞಾನ ವಿಸ್ತಾರ ಪರಿಪೂರ್ಣನಾಗಿರಬೇಕು ಅನುಭಾವ ಘನಮನವೇದ್ಯನಾಗಬೇಕು ಕಾಮದ ಕಣ್ಣರಿಯದಿರಬೇಕು ಶಬ್ದ ನಿಶ್ಶಬ್ಧವಾಗಬೇಕು ಮಹದಾಶ್ರಯದಲ್ಲಿ ಮನವು ಲೀಯವಾಗಬೇಕು. ಕೂಡಲಚೆನ್ನಸಂಗನಲ್ಲಿ ಏಕಾರ್ಥವಾಗಿರಬೇಕು