ಅಮೃತವ ಕಡೆವಲ್ಲಿ
ವಿಷವಟ್ಟಿ ಸುಡುವಲ್ಲಿ ದೇವರೆಂಬವರೆತ್ತ ಹೋದರೇನಿಂ ಭೋ ಅಂದೊಮ್ಮೆ ಓಡಿಹೋಗಿ ಆ ಶಿವನ ಮರೆಯ ಹೋಗುವಂದು ದೇವರೆಂಬವರೆತ್ತ ಹೋದರೇನಿಂ ಭೋ ಕೂಡಲಸಂಗಯ್ಯ ದೇವರಿಗೆ ದೇವನು ಇವರೆಲ್ಲ ಆಳೆಂಬುದನರಿಯಿರಿಂ ಭೋ !